ಕೇಪ್ಟೌನ್:ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮತ್ತು ಇತರೆ ಬೌಲರ್ಗಳ ನೆರವಿನಿಂದ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 210 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿ 13 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಭಾರತದ 223 ರನ್ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ 16ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. 2ನೇ ದಿನವಾದ ಇಂದು ಕೀಗನ್ ಪೀಟರ್ಸನ್ ಏಕಾಂಗಿ ಹೋರಾಟದ ಅರ್ಧಶತಕದ ಹೊರತಾಗಿಯೂ 210 ರನ್ಗಳಿಸಲಷ್ಟೇ ಶಕ್ತವಾಯಿತು.
ನಿನ್ನೆ 8 ರನ್ಗಳಿಸಿ 2ನೇ ದಿನ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದ ಮಾರ್ಕ್ರಮ್ 2ನೇ ದಿನದ 2ನೇ ಎಸೆತದಲ್ಲೇ ಬುಮ್ರಾ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಇನ್ನು ನೈಟ್ ವಾಚ್ಮನ್ ಆಗಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಕೇಶವ್ ಮಹಾರಾಜ್ 45 ಎಸೆತಗಳಲ್ಲಿ 4 ಬೌಂಡರಿ ಸಹಿತ 25 ರನ್ಗಳಿಸಿ ಉಮೇಶ್ ಯಾದವ್ಗೆ ವಿಕೆಟ್ ಒಪ್ಪಿಸಿದರು.
ಆದರೆ 4ನೇ ವಿಕೆಟ್ಗೆ ಜೊತೆಯಾದ ಕೀಗನ್ ಪೀಟರ್ಸನ್ ಮತ್ತು ವ್ಯಾನ್ ಡರ್ ಡಸೆನ್ 67 ರನ್ಗಳ ಜೊತೆಯಾಟ ನೀಡಿ ಕುಸಿಯುತ್ತಿದ್ದ ತಂಡಕ್ಕೆ ಚೇತರಿಕೆ ನೀಡಿದರು. ವ್ಯಾನ್ ಡರ್ ಡಸೆನ್ 54 ಎಸೆತಗಲಲ್ಲಿ 24 ರನ್ಗಳಿಸಿ ಯಾದವ್ಗೆ 2ನೇ ಬಲಿಯಾದರು.