ಕರ್ನಾಟಕ

karnataka

ETV Bharat / sports

ಬುಮ್ರಾಗೆ 5 ವಿಕೆಟ್; 109ಕ್ಕೆ ಆಲೌಟ್ ಆದ ಶ್ರೀಲಂಕಾ, ಭಾರತಕ್ಕೆ 143ರನ್​ಗಳ ಮುನ್ನಡೆ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ ಭಾರತ ತಂಡ 252 ರನ್​ಗಳಿಗೆ ಆಲೌಟ್ ಆದರೆ, ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 86 ರನ್​ಗಳಿಸಿತ್ತು. ಆದರೆ ಇಂದು ಆ ಮೊತ್ತಕ್ಕೆ ಕೇವಲ 23 ರನ್​ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

India dismiss SL for 109 on day 2 of second Test
ಭಾರತ vs ಶ್ರೀಲಂಕಾ ಟೆಸ್ಟ್​

By

Published : Mar 13, 2022, 3:03 PM IST

ಬೆಂಗಳೂರು:ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಪ್ರವಾಸಿ ಶ್ರೀಲಂಕಾ ತಂಡವನ್ನು ಅಹರ್ನಿಶಿ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 109ರನ್​ಗಳಿಗೆ ಆಲೌಟ್ ಮಾಡಿ 143 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದುಕೊಂಡಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ ಭಾರತ ತಂಡ 252 ರನ್​ಗಳಿಗೆ ಆಲೌಟ್ ಆದರೆ, ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 86 ರನ್​ಗಳಿಸಿತ್ತು. ಆದರೆ ಇಂದು ಆ ಮೊತ್ತಕ್ಕೆ ಕೇವಲ 23 ರನ್​ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಶನಿವಾರ 10 ರನ್​ಗಳಿಸಿ ಅಜೇಯರಾಗಿ ಉಳಿದಿದ್ದ ನಿರೋಶನ್ ಡಿಕ್ವೆಲ್ಲಾ ಇಂದು 21 ರನ್​ ಮತ್ತು ಲಸಿತ್ ಎಂಬುಲ್ದೇನಿಯಾ 1 ರನ್​ಗಳಿಸಿ ಬುಮ್ರಾಗೆ ವಿಕೆಟ್​ ಒಪ್ಪಿಸಿದರೆ, ಲಕ್ಮಲ್(5) ಮತ್ತು ವಿಶ್ವ ಫರ್ನಾಂಡೊ(8) ವಿಕೆಟ್​ಗಳು​ ಅಶ್ವಿನ್​​ ಪಾಲಾದವು.

ನಿನ್ನೆ ಭಾರತದ 252 ರನ್​ಗಳನ್ನು ಹಿಂಬಾಲಿಸಿದ ಶ್ರೀಲಂಕಾ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 86ರನ್​ಗಳಿಸುವಷ್ಟರಲ್ಲಿ ತನ್ನ 6 ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಕುಸಾಲ್ ಮೆಂಡಿಸ್​(2), ಲಹಿರು ತಿರುಮನ್ನೆ(5) ಮತ್ತು ಏಂಜೆಯೋ ಮ್ಯಾಥ್ಯೂಸ್​(43) ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಮೊಹಮ್ಮದ್ ಶಮಿ ಲಂಕಾ ನಾಯಕ ಕರುಣರತ್ನೆ(4) ಮತ್ತು ಆಲ್​ರೌಂಡರ್​ ಧನಂಜಯ ಡಿ ಸಿಲ್ವಾ(10) ರನ್ನು ಪೆವಿಲಿಯನ್​ಗಟ್ಟಿದರು. ಉತ್ತಮ ಲಯದಲ್ಲಿರುವ ಚರಿತ್ ಅಸಲಂಕಾ (10) ವಿಕೆಟ್​ ಆಲ್​ರೌಂಡರ್ ಅಕ್ಷರ್ ಪಟೇಲ್ ಸ್ಪಿನ್​ ಜಾಲಕ್ಕೆ ಬಿದ್ದರು.

ಜಸ್ಪ್ರೀತ್ ಬುಮ್ರಾ 24ಕ್ಕೆ 5, ರವಿಚಂದ್ರನ್ ಅಶ್ವಿನ್​ 30ಕ್ಕೆ2 ಮತ್ತು ಮೊಹಮ್ಮದ್ ಶಮಿ 18ಕ್ಕೆ 2 ಹಾಗೂ ಅಕ್ಷರ್ ಪಟೇಲ್ 21ಕ್ಕೆ 1ವಿಕೆಟ್​ ಪಡೆದರು.

ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೂಡ ಪ್ರವಾಸಿ ತಂಡದ ಸ್ಪಿನ್​ ದಾಳಿಗೆ ತತ್ತರಿಸಿ 252 ರನ್​ಗಳಿಸಿತ್ತು. ಶ್ರೇಯಸ್​ ಅಯ್ಯರ್​ 92 ಮತ್ತು ಪಂತ್ 39 ರನ್​ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು.

ಇದನ್ನೂ ಓದಿ:ಹೊರಗಿನಿಂದ ಬಂದ ನನಗೆ ತಂಡದ ನಾಯಕತ್ವ ನೀಡಿರುವುದಕ್ಕೆ ಆರ್​ಸಿಬಿಗೆ ಕೃತಜ್ಞನಾಗಿರುತ್ತೇನೆ: ಡುಪ್ಲೆಸಿಸ್​

ABOUT THE AUTHOR

...view details