ನವದೆಹಲಿ:ನಿರಂತರ ಕ್ರಿಕೆಟ್ ಮತ್ತು ಕಠಿಣ ಬಯೋಬಬಲ್ ವ್ಯವಸ್ಥೆಯಿಂದ ಬಳಲಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ರಿಗೆ ಬಿಸಿಸಿಐ 10 ದಿನಗಳ ವಿಶ್ರಾಂತಿ ನೀಡಿದೆ. ಇದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮತ್ತು ಮೂರನೇ ಟಿ-20 ಪಂದ್ಯಕ್ಕೂ ಮುನ್ನ ಈ ಇಬ್ಬರು ಆಟಗಾರರು ಬಯೋಬಬಲ್ ವ್ಯವಸ್ಥೆಯಿಂದ ತಮ್ಮ ಮನೆಗಳಿಗೆ ತೆರಳಲಿದ್ದಾರೆ.
ವಿರಾಟ್ ಮತ್ತು ಪಂತ್ಗೆ ವಿಶ್ರಾಂತಿ ನೀಡಿದ ಕಾರಣ ಕೆರೆಬಿಯನ್ನರ ವಿರುದ್ಧದ ಕೊನೆಯ, ಮುಂಬರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗೆ ಅಲಭ್ಯರಾಗಲಿದ್ದಾರೆ. ನಿರಂತರ ಕ್ರಿಕೆಟ್ ಮತ್ತು ಬಯೋಬಬಲ್ ವ್ಯವಸ್ಥೆಯಿಂದ ಆಟಗಾರರು ಧಣಿದಿದ್ದಾರೆ. ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯ ದೃಷ್ಟಿಯಿಂದ ವಿರಾಟ್ ಮತ್ತು ಪಂತ್ಗೆ 10 ದಿನಗಳ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.