ದುಬೈ :ಐಸಿಸಿ ಭ್ರಷ್ಟಾಚಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಿಂಬಾಬ್ವೆ ಕ್ರಿಕೆಟ್ನ ಮಾಜಿ ಕ್ಯಾಪ್ಟನ್ ಬ್ರೆಂಡನ್ ಟೇಲರ್ ಮೇಲೆ ಮೂರೂವರೆ ವರ್ಷಗಳ ನಿಷೇಧ ಹೇರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಹತ್ವದ ನಿರ್ಧಾರ ಹೊರ ಹಾಕಿದೆ.
ಕಳೆದ ಕೆಲ ದಿನಗಳ ಹಿಂದೆ ಇದರ ಬಗ್ಗೆ ಖುದ್ದಾಗಿ ಹೇಳಿಕೊಂಡಿದ್ದ ಬ್ರೆಂಡನ್ ಟೇಲರ್, ಸ್ಪಾಟ್ ಫಿಕ್ಸಿಂಗ್ಗೋಸ್ಕರ ಭಾರತೀಯ ಉದ್ಯಮಿಯೊಬ್ಬರು ತಮಗೆ ಬೆದರಿಕೆವೊಡ್ಡಿದ್ದರು.
ಆದರೆ, ತಾವು ಯಾವುದೇ ವಿಧವಾದ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ವಿಚಾರಣೆ ನಡೆಸಿದ ಐಸಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
2019ರಲ್ಲಿ ನಡೆದ ಘಟನೆ ಬಗ್ಗೆ ಐಸಿಸಿಗೆ ಮಾಹಿತಿ ನೀಡದ ಕಾರಣ ಅವರ ಮೇಲೆ ಇದೀಗ ಭ್ರಷ್ಟಾಚಾರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಮೂರೂವರೆ ವರ್ಷಗಳ ಕಾಲ ಎಲ್ಲ ರೀತಿಯ ಕ್ರಿಕೆಟ್ನಿಂದ ನಿಷೇಧ ಹೇರಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಬ್ರೆಂಡನ್ ಟೇಲರ್ 17 ವರ್ಷಗಳ ವೃತ್ತಿ ಬದುಕಿಗೆ ಈಗಾಗಲೇ ಪೂರ್ಣವಿರಾಮ ನೀಡಿದ್ದಾರೆ.
ಇದನ್ನೂ ಓದಿರಿ:ಸ್ಪಾಟ್ ಫಿಕ್ಸಿಂಗ್ಗಾಗಿ ಭಾರತೀಯ ಉದ್ಯಮಿಗಳಿಂದ ಬ್ಲ್ಯಾಕ್ಮೇಲ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜಿಂಬಾಬ್ವೆ ಕ್ರಿಕೆಟರ್
ಭಾರತದ ಉದ್ಯಮಿಯೊಬ್ಬರು 2019ರ ಅಕ್ಟೋಬರ್ ತಿಂಗಳಲ್ಲಿ ಪ್ರಾಯೋಜಕತ್ವ ಹಾಗೂ ಜಿಂಬಾಬ್ವೆಯಲ್ಲಿ ಟಿ-20 ಲೀಗ್ ಆರಂಭಿಸುವ ಬಗ್ಗೆ ಚರ್ಚಿಸೋಣ ಎಂದು ಭಾರತಕ್ಕೆ ಆಹ್ವಾನಿಸಿದ್ದರು. ಮಾತುಕತೆ ವೇಳೆ ಮಾದಕ ದ್ರವ್ಯ ಸೇವಿಸುವಂತೆ ಮಾಡಿದ್ದರು.
ಇದರ ವಿಡಿಯೋ ಚಿತ್ರೀಕರಣ ಮಾಡಿ, ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗುವಂತೆ ತಿಳಿಸಿದ್ದರು. ಜೊತೆಗೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಸಹ ಹಾಕಿದ್ದರು ಎಂದು ಬ್ರೆಂಡನ್ ತಿಳಿಸಿದ್ದರು. ಇದರ ಬಗ್ಗೆ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡದ ಕಾರಣ ಐಸಿಸಿ ಇದೀಗ ಅವರ ಮೇಲೆ ನಿಷೇಧ ಹೇರಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ