ಮೆಲ್ಬೋರ್ನ್ :ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಆ್ಯಶಸ್ ಸರಣಿಯಲ್ಲಿ ದಾಖಲೆಯ 2 ಬಾರಿ ತ್ರಿಶತಕ ಸಿಡಿಸಿದ ಬ್ಯಾಟ್ ಅನ್ನು ಇದೀಗ ಹರಾಜಿಗೆ ಇಡಲಾಗಿದೆ. 1999ರಿಂದ ಆಸ್ಟ್ರೇಲಿಯಾದ ಸದರ್ನ್ ಹೈಲ್ಯಾಂಡ್ನಲ್ಲಿನ ಬ್ರಾಡ್ಮನ್ ಮ್ಯೂಸಿಯಂನಲ್ಲಿ ಈ ಬ್ಯಾಟ್ ಅನ್ನು ಸಂರಕ್ಷಣೆ ಮಾಡಲಾಗುತ್ತಿದೆ.
ಡೊನಾಲ್ಡ್ ಬ್ಯಾಡ್ಮನ್ ಅವರು 1934ರಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಎರಡು ಬಾರಿ 300ಕ್ಕೂ ಅಧಿಕ ರನ್ಗಳನ್ನು ಇದೇ ಬ್ಯಾಟ್ನಿಂದ ಬಾರಿಸಿದ್ದರು. ಅಲ್ಲದೇ, ಇದೇ ಸರಣಿಯಲ್ಲಿ ಸಹ ಆಟಗಾರ ಬಿಲ್ ಪೊನ್ಸ್ಪೋರ್ಡ್ ಜೊತೆ ಸೇರಿ 451ರನ್ ಬಾರಿಸಿ ಅತ್ಯಧಿಕ ಜೊತೆಯಾಟದ ದಾಖಲೆ ನಿರ್ಮಿಸಿದ್ದರು.
ಬ್ಯಾಟ್ ಮೇಲೆ ಉಲ್ಲೇಖವಾಗಿರುವ ಡಾನ್ ಬ್ರಾಡ್ಮನ್ರ ರನ್ ದಾಖಲೆ ಹರಾಜಿಗಿಡಲಾದ ಬ್ಯಾಟ್ ಮೇಲೆ ಸ್ವತಃ ಬ್ರಾಡ್ಮನ್ ಅವರೇ ತಾವು ಬಾರಿಸಿದ ದಾಖಲೆ ರನ್ಗಳನ್ನು ಅದರ ಮೇಲೆ ಬರೆದಿದ್ದಾರೆ. ಬ್ರಾಡ್ಮನ್ರ ಈ ವಿಶೇಷ ಬ್ಯಾಟ್ ಅನ್ನು ಹರಾಜಿಗೆ ಇಡಲಾಗಿದ್ದು, ಇದಕ್ಕೆ ಬೆಲೆ ನಿಗದಿ ಮಾಡಿಲ್ಲ. ಇದರ ಮೇಲೆ ಯಾವುದೇ ತಕರಾರು ಕೂಡ ಇಲ್ಲ ಎಂದು ಮ್ಯೂಸಿಯಂ ಕಾರ್ಯನಿರ್ವಾಹಕ ನಿರ್ದೇಶಕಿ ರಿನಾ ಹೋರ್ ತಿಳಿಸಿದ್ದಾರೆ.
ಇದನ್ನೂ ಓದಿ: ICC Test Rankings :11ನೇ ಸ್ಥಾನಕ್ಕೆ ಲಗ್ಗೆ ಹಾಕಿದ ಕನ್ನಡಿಗ ಮಯಾಂಕ್, ಬೌಲಿಂಗ್ ವಿಭಾಗದಲ್ಲಿ ಅಶ್ವಿನ್ಗೆ 2ನೇ ಸ್ಥಾನ
ಈ ಹಿಂದೆಯೂ ಕೂಡ ಬ್ರಾಡ್ಮನ್ರ ಮತ್ತೊಂದು ಬ್ಯಾಟ್ ಅನ್ನು ಹರಾಜಿಗಿಡಲಾಗಿತ್ತು. ಈ ವೇಳೆ ಅದು 110,000 ಆಸ್ಟ್ರೇಲಿಯನ್ ಡಾಲರ್ಗೆ ಮಾರಾಟ ಕಂಡಿತ್ತು.