ಅಬು ದಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 92 ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಸ್ವತಃ 5ರನ್ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು, ತಮ್ಮ 200ನೇ ಪಂದ್ಯದಲ್ಲಿ ನಿರಾಶೆಯನುಭವಿಸಿದರು.
ನಂತರ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಯುವ ಆಟಗಾರರಾದ ದೇವದತ್ ಪಡಿಕ್ಕಲ್(22) ಮತ್ತು ಪದಾರ್ಪಣೆ ಬ್ಯಾಟ್ಸ್ಮನ್ ಶ್ರೀಕಾರ್ ಭರತ್(16) 2ನೇ ವಿಕೆಟ್ಗೆ 31 ರನ್ ಸೇರಿಸಿದರು. ಪಡಿಕ್ಕಲ್(22) ಲಾಕಿ ಫರ್ಗ್ಯುಸನ್ ಬೌಲಿಂಗ್ನಲ್ಲಿ ಕಾರ್ತಿಕ್ಗೆ ಕ್ಯಾಚ್ ನೀಡಿ ನಿರ್ಗಮಿಸುತ್ತಿದ್ದಂತೆ ಆರ್ಸಿಬಿ ಅಧಃಫತನ ಆರಂಭವಾಯಿತು.
ನಂತರ 16 ರನ್ಗಳಿಸಿದ್ದ ಭರತ್ ವಿಂಡೀಸ್ ದೈತ್ಯ ರಸೆಲ್ ಬೌಲಿಂಗ್ನಲ್ಲಿ ಗಿಲ್ಗೆ ಕ್ಯಾಚ್ ನೀಡಿದರೆ, ನಂತರದ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ ಕ್ಲೀನ್ ಬೌಲ್ಡ್ ಆಗಿ ಗೋಲ್ಡನ್ ಡಕ್ ಆದರು.