ಕರ್ನಾಟಕ

karnataka

ETV Bharat / sports

ಬೌಲರ್​ಗಳ ಮಿಂಚಿನ ಪ್ರದರ್ಶನ: ರಾಜಸ್ಥಾನ ವಿರುದ್ಧ ಡೆಲ್ಲಿಗೆ 33 ರನ್​ಗಳ ಭರ್ಜರಿ ಜಯ - ಹೆಟ್ಮಾಯಿರ್

ಅಬು ಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತನ್ನ 20 ಓವರ್​ಗಳ ಕೋಟಾದಲ್ಲಿ 6 ವಿಕೆಟ್​ ಕಳೆದುಕೊಂಡು 154 ರನ್​ಗಳಿಸಿತ್ತು. ಶ್ರೇಯಸ್​ ಅಯ್ಯರ್ 32 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್​ಗಳ ನೆರವಿನಿಂದ 43 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು.

ರಾಜಸ್ಥಾನ ವಿರುದ್ಧ ಡೆಲ್ಲಿಗೆ 33 ರನ್​ಗಳ ಭರ್ಜರಿ ಜಯ
ರಾಜಸ್ಥಾನ ವಿರುದ್ಧ ಡೆಲ್ಲಿಗೆ 33 ರನ್​ಗಳ ಭರ್ಜರಿ ಜಯ

By

Published : Sep 25, 2021, 7:41 PM IST

Updated : Sep 25, 2021, 8:07 PM IST

ಅಬು ಧಾಬಿ: ಡೆಲ್ಲಿ ಕ್ಯಾಪಿಟಲ್ಸ್​ ಕಟ್ಟುನಿಟ್ಟಿನ ಬೌಲಿಂಗ್ ದಾಳಿಯ ಮುಂದೆ ತಬ್ಬಿಬ್ಬಾದ ರಾಜಸ್ಥಾನ ರಾಯಲ್ಸ್ ತಂಡ 155 ರನ್​ಗಳ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಬೆನ್ನಟ್ಟಲಾಗದೇ 33 ರನ್​ಗಳ ಸೋಲು ಕಂಡಿದೆ.

ಅಬು ಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತನ್ನ 20 ಓವರ್​ಗಳ ಕೋಟಾದಲ್ಲಿ 6 ವಿಕೆಟ್​ ಕಳೆದುಕೊಂಡು 154 ರನ್​ಗಳಿಸಿತ್ತು. ಶ್ರೇಯಸ್​ ಅಯ್ಯರ್ 32 ಎಸೆತಗಳಲ್ಲಿ ಒಂದು ಬೌಂಡರಿ 2 ಸಿಕ್ಸರ್​ಗಳ ನೆರವಿನಿಂದ 43 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದರು. ಇವರಿಗೆ ಸಾಥ್​ ನೀಡಿದ್ದ ಪಂತ್ 24 ಮತ್ತು ಹೆಟ್ಮಾಯಿರ್​ 28 ರನ್​ಗಳಿಸಿದ್ದರು.

155 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 121 ರನ್​ಗಳಿಸಿ 33 ರನ್​ಗಳ ಸೋಲು ಕಂಡಿತು. ಸಂಜು ಸಾಮ್ಸನ್​ 53 ಎಸೆತಗಳಲ್ಲಿ 8 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ ಅಜೇಯ 70 ರನ್​ಗಳಿಸಿದರಾದರೂ ಇತರೆ ಬ್ಯಾಟ್ಸ್​ಮನ್​ಗಳ ವೈಫಲ್ಯತೆಯಿಂದ ತಂಡದ ಸೋಲಿಗೆ ಕಾರಣವಾಯಿತು.

ಆರಂಭಿಕರ ವೈಫಲ್ಯ;

ಲೂಯಿಸ್​ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಲಿಯಾಮ್ ಲಿವಿಂಗ್​ಸ್ಟೋನ್​ ಮೊದಲ ಓವರ್​ನಲ್ಲೇ ಆವೇಶ್​ ಖಾನ್​ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಔಟಾದರು. ನಂತರದ ಓವರ್​ನಲ್ಲಿ ಯುವ ಆರಂಭಿಕ ಬ್ಯಾಟ್ಸ್​ಮನ್ ಜೈಸ್ವಾಲ್​ ಕೂಡ ಅದೇ ಮಾದರಿಯಲ್ಲಿ ನಾರ್ಟ್ಜ್​ಗೆ(ನೋಕಿಯಾ) ವಿಕೆಟ್​ ಒಪ್ಪಿಸಿದರು.

ನಂತರ ಬಂದ ಡೇವಿಡ್ ಮಿಲ್ಲರ್(7), ಮಹಿಪಾಲ್ ಲೋಮ್ರೋರ್(19), ರಿಯಾನ್ ಪರಾಗ್(2), ರಾಹುಲ್ ತೆವಾಟಿಯಾ(9) ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

ಅದ್ಭುತ ಬೌಲಿಂಗ್ ದಾಳಿ ನಡೆಸಿದ ಎನ್ರಿಚ್​ ನಾರ್ಟ್ಜ್​ 18ಕ್ಕೆ 2, ರವಿಚಂದ್ರನ್ ಅಶ್ವಿನ್​ 20ಕ್ಕೆ 1, ರಬಾಡ 26ಕ್ಕೆ1, ಆವೇಶ್​ ಖಾನ್ 29ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ​ಈ ಗೆಲುವಿನ ಮೂಲಕ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿತು.

ಇದನ್ನು ಓದಿ:ಈ ವರ್ಷ ರದ್ದಾಗಿರುವ ಭಾರತ - ಇಂಗ್ಲೆಂಡ್​ ನಡುವಣ 5ನೇ ಟೆಸ್ಟ್​ 2022ಕ್ಕೆ ಮರು ಆಯೋಜನೆ: ವರದಿ

Last Updated : Sep 25, 2021, 8:07 PM IST

ABOUT THE AUTHOR

...view details