ಓವಲ್:ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ನಿನ್ನೆ 31ನೇ ವಸಂತಕ್ಕೆ ಕಾಲಿಟ್ಟಿದ್ದು, ಓವರ್ನಲ್ಲಿ ಭಾರತೀಯ ಕ್ರೀಡಾಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ, ಬರ್ತಡೇ ಆಚರಣೆ ಮಾಡಿಕೊಂಡಿದ್ದಾರೆ.
ಓವಲ್ ಮೈದಾನದಲ್ಲಿ ಸದ್ಯ ಭಾರತ-ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಉಮೇಶ್ ಯಾದವ್ ಆಡುವ 11ರ ಬಳಗದಲ್ಲಿದ್ದಾರೆ.
ಇದನ್ನೂ ಓದಿರಿ: 2ನೇ ಇನ್ನಿಂಗ್ಸ್ನಲ್ಲಿ ವಿಕೆಟ್ನಷ್ಟವಿಲ್ಲದೇ 43ರನ್ಗಳಿಸಿದ ಭಾರತ, 56ರನ್ಗಳ ಹಿನ್ನಡೆ!
ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಭಾರತೀಯ ಕ್ರೀಡಾಭಿಮಾನಿಗಳ ಪೈಕಿ ಓರ್ವ ವ್ಯಕ್ತಿ ‘Happy Birthday Shami’ ಎಂದು ಬರೆಯಲಾಗಿದ್ದ ಟಿ-ಶರ್ಟ್ ಹಾಕಿಕೊಂಡಿದ್ದರು. ಕೇಕ್ ತೆಗೆದುಕೊಂಡು ಬಂದು, ಅದನ್ನ ಕತ್ತರಿಸುವಂತೆ ಮೊಹಮ್ಮದ್ ಶಮಿ ಬಳಿ ವಿನಂತಿ ಸಹ ಮಾಡಿಕೊಂಡಿದ್ದನು ಈ ವೇಳೆ ಅಲ್ಲಿಗೆ ಆಗಮಿಸಿದ ವೇಗದ ಬೌಲರ್ ಕೇಕ್ ಕತ್ತರಿಸಿದ್ದಾರೆ. ಇದರ ವಿಡಿಯೋ ಸದ್ಯ ಟ್ವಿಟರ್ನಲ್ಲಿ ಶೇರ್ ಆಗಿದೆ.