ನಾಗ್ಪುರ (ಮಹಾರಾಷ್ಟ್ರ):ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನ ಎರಡನೇ ದಿನದಾಟದ ಅಂತ್ಯಗೊಂಡಿದ್ದು, ಭಾರತ 7 ವಿಕೆಟ್ಗೆ 321 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ, ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ರ ಅರ್ಧಶತಕ ನೆರವಿನಿಂದ 144 ರನ್ಗಳ ಮುನ್ನಡೆ ಪಡೆಯಿತು.
ಏಕದಿನದ ಮಾದರಿಯಲ್ಲಿ ಬ್ಯಾಟ್ ಬೀಸಿದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ (120) ಸಿಡಿಸಿದರು. 212 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್ ಸಮೇತ 120 ರನ್ ಗಳಿಸಿದರು. ಇದು ಅವರ ಟೆಸ್ಟ್‌ನ 9ನೇ ಶತಕವಾಗಿದೆ. ಮೊದಲ ದಿನದಲ್ಲಿ ಕೆಎಲ್ ರಾಹುಲ್ 20 ರನ್ಗೆ ನಿರ್ಗಮಿಸಿದ ಬಳಿಕ ಅಶ್ವಿನ್ ಜೊತೆ ಕ್ರೀಸ್ ಉಳಿಸಿಕೊಂಡಿದ್ದ ರೋಹಿತ್ ದಿನದಾಟ ಆರಂಭಿಸಿದರು. ಉತ್ತಮವಾಗಿ ಆಡುತ್ತಿದ್ದ ಅಶ್ವಿನ್ ಯುವ ಸ್ಪಿನ್ನರ್ ಟಾಡ್ ಮೊರ್ಪೆಯ ಎಲ್ಬಿ ಬಲೆಗೆ ಬಿದ್ದರು. ಬಳಿಕ ಬಂದ ಟೆಸ್ಟ್ ಪರಿಣತ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರಾ 7 ರನ್ಗೆ ಔಟಾದರು.
ಏಕದಿನದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ 12 ರನ್ಗೆ ವಿಕೆಟ್ ನೀಡಿ ನಿರಾಸೆ ಮೂಡಿಸಿದರು. ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ 8 ರನ್ ಪೆವಿಲಿಯನ್ ಸೇರಿದರೆ, ವಿಕೆಟ್ ಕೀಪರ್ ಶ್ರೀಕರ್ ಭರತ್ ಕೂಡ ಗಳಿಸಿದ್ದು 8 ರನ್. ಒಂದರ ಹಿಂದೆ ವಿಕೆಟ್ ಕಳೆದುಕೊಂಡ ಭಾರತ ತುಸು ಒತ್ತಡಕ್ಕೆ ಸಿಲುಕಿತು.
ಅಕ್ಷರ್ ಪಟೇಲ್- ಜಡೇಜಾ ಜುಗಲ್ಬಂಧಿ:ರೋಹಿತ್ ಹೊರತಾಗಿ ಉಳಿದ ಬ್ಯಾಟರ್ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು. ರೋಹಿತ್ ಔಟಾದ ಬಳಿಕ ಜೊತೆಗೂಡಿದ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಇನಿಂಗ್ಸ್ ಮುನ್ನಡೆಸಿದರು. ರವೀಂದ್ರ ಜಡೇಜಾ 170 ಎಸೆತಗಳಲ್ಲಿ 66 ರನ್ ಗಳಿಸಿದರೆ, ಅಕ್ಷರ್ ಪಟೇಲ್ 102 ಬಾಲ್ಗಳಲ್ಲಿ 52 ರನ್ ಮಾಡಿದರು. ಇಬ್ಬರೂ 80 ರನ್ಗಳ ಜೊತೆಯಾಟ ನೀಡಿದ್ದಲ್ಲದೇ ನಾಳೆಗೆ ವಿಕೆಟ್ ಕಾಯ್ದಕೊಂಡಿದ್ದಾರೆ.