ನವದೆಹಲಿ: ಬಾರ್ಡರ್ - ಗವಾಸ್ಕರ್ ಟ್ರೋಫಿ ನಾಳೆಯಿಂದ ಆರಂಭವಾಗಲಿದೆ. ಮಹಾರಾಷ್ಟ್ರದ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಆಟಗಾರರು ಉತ್ಸುಕರಾಗಿದ್ದಾರೆ. ಅಲ್ಲದೇ, ಮೊದಲ ಪಂದ್ಯದ ಮೊದಲ ದಿನದ ಆಟ ವೀಕ್ಷಿಸಲು ಅಂದಾಜು 40 ಸಾವಿರ ಕ್ರಿಕೆಟ್ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ.
ನಾಲ್ಕು ಪಂದ್ಯಗಳ ಈ ಟೂರ್ನಿಯಲ್ಲಿ ಭಾರತದಲ್ಲಿ 2004ರಿಂದಲೂ ಆಸ್ಟ್ರೇಲಿಯಾ ತಂಡ ಸರಣಿಯನ್ನು ಗೆದ್ದಿಲ್ಲ. ಆದರೆ, ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಮೂರು ಆವೃತ್ತಿಗಳಲ್ಲಿ ಭಾರತ ಎರಡು ಬಾರಿ ಟ್ರೋಫಿಯನ್ನು ಗೆದ್ದಿದೆ. 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಭಾರತ ತಂಡ ಸರಣಿ ಸೋತಿತ್ತು. ಆಸ್ಟ್ರೇಲಿಯಾದ ಆಟಗಾರರು ಭಾರತದ ವಿರುದ್ಧ ಸರಣಿ ಗೆಲ್ಲಲು ಎದುರು ನೋಡುತ್ತಿದ್ದಾರೆ.
ಹೀಗಾಗಿ ಬುಧವಾರ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮುಖ್ಯವಾಗಿ ಸ್ಪಿನ್ನಿಂಗ್ ಟ್ರ್ಯಾಕ್, ಡ್ರೈ ವಿಕೆಟ್ ತಮ್ಮ ತಂಡಕ್ಕೆ ಎಷ್ಟು ದೊಡ್ಡ ಸವಾಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸುಮಾರು ಎರಡು ದಶಕಗಳಿಂದ ಭಾರತದ ನೆಲದಲ್ಲಿ ಸರಣಿಯನ್ನು ಗೆದ್ದಿಲ್ಲ. ಈ ಬಗ್ಗೆ ಹೆಚ್ಚು ಯೋಚಿಸಿ ತಂಡದ ಮೇಲೆ ಒತ್ತಡಯನ್ನು ಹಾಕುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಈಗಿರುವ ಆಸೀಸ್ ತಂಡ ಈ ಹಿಂದೆ ಆಡಿದ ಎಲ್ಲ ತಂಡಗಳಿಗಿಂತ ಭಿನ್ನವಾಗಿದೆ. ಆದ್ದರಿಂದ ಈ ಬಾರಿ ಗೆಲ್ಲುವ ಯೋಚನೆಯಲ್ಲಿದ್ದೇವೆ. ಭಾರತ ಪ್ರವಾಸವು ಕಠಿಣ ಎಂದು ನಮಗೆ ಗೊತ್ತಿಲ್ಲ. ಟೀಂ ಇಂಡಿಯಾ ನಿಜಕ್ಕೂ ಉತ್ತಮ ತಂಡ. ಅದರಲ್ಲೂ ವಿಶೇಷವಾಗಿ ತವರಿನಲ್ಲಿ ಉತ್ತಮವಾಗಿ ಆಡುತ್ತಾರೆ. ಆದರೂ, ನಾವು ಅತ್ಯುತ್ತಮ ಪ್ರರ್ದಶನ ನೀಡಲು ನಾವು ಉತ್ಸುಕರಾಗಿದ್ದೇವೆ ಎಂದು ಕಮಿನ್ಸ್ ತಿಳಿಸಿದ್ದಾರೆ.
ಇದೇ ವೇಳೆ ಭಾರತದ ನೆಲದಲ್ಲಿ ವಿದೇಶಿ ಸ್ಪಿನ್ನರ್‌ಗಳ ಪೈಕಿ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಟಾಡ್ ಮರ್ಫಿ ಸೇರಿದಂತೆ ನಾಥನ್ ಲಿಯಾನ್ ಮೇಲೆ ಆಸ್ಟ್ರೇಲಿಯಾ ತಂಡ ಭರವಸೆಯನ್ನು ಹೊಂದಿದೆ. ಗುರುವಾರದ ಟೆಸ್ಟ್‌ನಲ್ಲಿ ಪ್ರವಾಸಿ ತಂಡವು ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕೆ ಇಳಿಯಲಿದೆಯೋ ಅಥವಾ ಸ್ಪಿನ್ ತಂತ್ರವನ್ನು ಬಲಪಡಿಸುತ್ತದೆಯೋ ಎಂಬುದನ್ನು ಕಮಿನ್ಸ್ ಬಹಿರಂಗಪಡಿಸದಿದ್ದರೂ, ಇಡೀ ಜನರ ಆಟಗಾರರು ಇಡೀ ಪಂದ್ಯವನ್ನು ನಿರ್ಧರಿಸುತ್ತಾರೆ ಎಂದಿದ್ದಾರೆ.