ದುಬೈ: ಕೋವಿಡ್ 19 ಕಾರಣದಿಂದ ಬಿಸಿಸಿಐ ಟಿ20 ವಿಶ್ವಕಪ್ಅನ್ನು ಭಾರತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಯೋಜಿಸಿತ್ತಿದೆ. ಆದರೂ ಆಯೋಜನೆ ಹಕ್ಕನ್ನು ಹೊಂದಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬರೋಬ್ಬರಿ 89.3 ಕೋಟಿ(12 ಮಿಲಿಯನ್ ಡಾಲರ್) ಲಾಭದ ನಿರೀಕ್ಷೆಯಲ್ಲಿದೆ ಎಂದು ಇತ್ತೀಚೆಗೆ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತನ್ನ ಸದಸ್ಯರಿಗೆ ತಿಳಿಸಿದೆ.
ಟಿ2 ವಿಶ್ವಕಪ್ನ ಮೊದಲ 7 ಅರ್ಹತಾ ಪಂದ್ಯಗಳು ಓಮನ್ನಲ್ಲಿ ನಡೆಯಲಿದೆ. ಉಳಿದ 39 ಪಂದ್ಯಗಳು ಯುಎಇಯ ಶಾರ್ಜಾ, ಅಬುಧಾಬಿ ಮತ್ತು ಶಾರ್ಜಾದಲ್ಲಿ ನಡೆಯಲಿವೆ. ಇದಕ್ಕಾಗಿ ಬಿಸಿಸಿಐ ಇಸಿಬಿಗೆ( Emirates Cricket Board) 7 ಮಿಲಿಯನ್ ಅಮೆರಿಕನ್ ಡಾಲರ್ ಮತ್ತು ಓಮನ್ ಕ್ರಿಕೆಟ್ ಬೋರ್ಡ್ಗೆ 1.5 ಮಿಲಿಯನ್ ಡಾಲರ್ ಮೊತ್ತವನ್ನು ಆಯೋಜನಾ ಶುಲ್ಕವಾಗಿ ಬಿಸಿಸಿಐ ನೀಡಲಿದೆ.