ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದ ಬಾಂಗ್ಲಾ ಬ್ಯಾಟಿಂಗ್​ ಆಯ್ಕೆ: ಗೆಲ್ಲುವ ಒತ್ತಡದಲ್ಲಿ ಭಾರತ

ಒಂದು ವಿಕೆಟ್​ಗಳಿಂದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಬಾಂಗ್ಲಾ ಇಂದು ಸರಣಿ ವಶಪಡಿಸಿಕೊಳ್ಳಲು ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಭಾರತದೊಂದಿಗೆ ಸೆಣಸುತ್ತಿದೆ.

Bangladesh opt to bat first
ಟಾಸ್​ ಗೆದ್ದ ಬಾಂಗ್ಲಾ ಬ್ಯಾಟಿಂಗ್​ ಆಯ್ಕೆ: ಗೆಲ್ಲುವ ಒತ್ತಡದಲ್ಲಿ ಭಾರತ

By

Published : Dec 7, 2022, 11:27 AM IST

Updated : Dec 7, 2022, 12:01 PM IST

ಬಾಂಗ್ಲಾದೇಶ: ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್​, ಬ್ಯಾಟಿಂಗ್, ಫೀಲ್ಡಿಂಗ್​ನಲ್ಲಿ ಪೂರ್ಣ ವೈಫಲ್ಯದಿಂದ ಹೀನಾಯ ಸೋಲನುಭವಿಸಿದ್ದ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಬೇಕಾಗಿದೆ.

ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ. ಉಭಯ ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಶಾಹಬಾಜ್​ ಅಹಮದ್​ ಬದಲಿಗೆ ಆಲ್​ರೌಂಡರ್​ ಅಕ್ಷರ್​ ಪಟೇಲ್ ಕಣಕ್ಕಿಳಿದ್ದಾರೆ. ಯುವ ವೇಗಿ ಕುಲ್​ಸೇನ್​ ಕಾರಣಾಂತರಗಳಿಂದ ಪಂದ್ಯದಿಂದ ಹೊರಗುಳಿದಿದ್ದು ಉಮ್ರಾನ್​ ಮಲಿಕ್​ರನ್ನು ಆಡಿಸಲಾಗುತ್ತದೆ. ಬಾಂಗ್ಲಾದಲ್ಲಿ ಒಂದು ಬದಲಾವಣೆ ಆಗಿದ್ದು, ಹಸನ್​ ಮಹಮದ್​ ಜಾಗದಲ್ಲಿ ನಸುಮ್​ ಮಹಮದ್​ ಆಡಲಿದ್ದಾರೆ.

ಭಾರತ (ಆಡುವ 11): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್

ಬಾಂಗ್ಲಾದೇಶ (ಆಡುವ 11): ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್​ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ರೋಹಿತ್​ ಬಳಗಕ್ಕೆ ಅಗ್ನಿ ಪರೀಕ್ಷೆ.. ಮತ್ತೆ ರಿಪೀಟ್​ ಆಗಲಿದೆಯಾ ಇತಿಹಾಸ!?

Last Updated : Dec 7, 2022, 12:01 PM IST

ABOUT THE AUTHOR

...view details