ಕೇಪ್ಟೌನ್: ಭಾರತ ತಂಡದ ವಿರುದ್ಧ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ಪಾಲಿಗೆ ಕಳೆದ 10-15 ವರ್ಷಗಳಲ್ಲಿ ಅತ್ಯಂತ ಮಹತ್ವದ ಪಂದ್ಯ ಎಂದು ಅತಿಥೇಯ ತಂಡದ ನಾಯಕ ಡೀನ್ ಎಲ್ಗರ್ ಹೇಳಿದ್ದಾರೆ.
ಸರಣಿ ನಿರ್ಣಯಿಸುವ ಕೊನೆಯ ಪಂದ್ಯಕ್ಕೂ ಮುನ್ನ ಮಾತನಾಡಿದ ಅವರು, ವಿರಾಟ್ ಕೊಹ್ಲಿ ತಂಡಕ್ಕೆ ಸೇರಿಕೊಂಡಿರುವುದರಿಂದ ಎರಡೂ ತಂಡಗಳ ನಡುವಿನ ರೋಚಕತೆಯನ್ನು ತೀವ್ರಗೊಳಿಸಲಿದೆ ಎಂದು ಕೇಪ್ಟೌನ್ ಟೆಸ್ಟ್ಗೂ ಮುನ್ನ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಪಂದ್ಯಕ್ಕೆ ವಿಭಿನ್ನವಾದ ಉತ್ಸಾಹವನ್ನು ತರಲಿದ್ದಾರೆ. ಅವರನ್ನು ಹಿಂದಿನ ಪಂದ್ಯದಲ್ಲಿ ಅವರಿಲ್ಲದ್ದು ನಮಗೆ ಅನಕೂಲವಾಗಿತ್ತು ಎಂದು ನಾನು ಭಾವಿಸುವುದಿಲ್ಲ. ಆದರೆ ಅವರ ತಂಡ ಅವರನ್ನು ಮಿಸ್ ಮಾಡಿಕೊಂಡಿತ್ತು. ಕೇವಲ ನಾಯಕತ್ವ ದೃಷ್ಟಿಕೋನದಲ್ಲಲ್ಲ, ಜೊತೆಗೆ ತಂತ್ರಗಾರಿಕೆಯಲ್ಲೂ ಎದುರಾಳಿ ತಂಡ ಕೊಹ್ಲಿಯನ್ನು ಮಿಸ್ ಮಾಡಿಕೊಂಡಿತ್ತು.
ಅವರೊಬ್ಬ ವಿಶ್ವದರ್ಜೆಯ ಆಟಗಾರ ಮತ್ತು ಅವರ ತಂಡದಲ್ಲಿ ಅನುಭವವುಳ್ಳ ಆಟಗಾರ. ಅವರ ಹೆಸರೇ ಇದನ್ನೆಲ್ಲಾ ಹೇಳುತ್ತಿದೆ. ನಾವು ನಮ್ಮ ಸುತ್ತ ಇರುವ ಹೆಚ್ಚು ಗೌರವಾನ್ವಿತ ಕ್ರಿಕೆಟಿಗರಲ್ಲಿ ಒಬ್ಬರು. ಆದರೆ ನಾವು ಆಡುವುದು ಯಾರ ವಿರುದ್ಧ ಎನ್ನುವುದು ವಿಷಯವಲ್ಲ. ನಾವು ಒಂದು ತಂಡವನ್ನು ಹೊಂದಿದ್ದೇವೆ, ತಂಡವಾಗಿಯೇ ಆಲೋಚಿಸುತ್ತೇವೆ ಎಂದು ಕೊಹ್ಲಿ ಕಮ್ಬ್ಯಾಕ್ ಸಮಸ್ಯೆಯಾಗಬಹುದೇ ಎಂಬ ಪ್ರಶ್ನೆಗೆ ಎಲ್ಗರ್ ಪ್ರತಿಕ್ರಿಯಿಸಿದ್ದಾರೆ.