ಕರ್ನಾಟಕ

karnataka

ETV Bharat / sports

Big Bash League 2023: ಬಿಗ್ ಬ್ಯಾಷ್ ಲೀಗ್​ಗೆ ಹೊಸ ಸ್ವರೂಪ.. ಐಪಿಎಲ್​ ಮಾದರಿಯ ಪ್ಲೇಆಫ್​ ಪಂದ್ಯಗಳು! - ಕ್ರಿಕೆಟ್ ಆಸ್ಟ್ರೇಲಿಯಾ

Big Bash League 2023: ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್ ಟೂರ್ನಿಯ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಐಪಿಎಲ್​ ಮಾದರಿಯ ಪ್ಲೇಆಫ್ ಪಂದ್ಯಗಳು ಇರಲಿವೆ.

big-bash-league-unveils-new-ipl-playoff-style-final-series
Big Bash League 2023: ಬಿಗ್ ಬ್ಯಾಷ್ ಲೀಗ್​ಗೆ ಹೊಸ ಸ್ವರೂಪ... ಐಪಿಎಲ್​ ಮಾದರಿಯ ಪ್ಲೇಆಫ್​ ಪಂದ್ಯಗಳು!

By

Published : Jul 6, 2023, 7:43 PM IST

ನವದೆಹಲಿ: ಬಿಗ್ ಬ್ಯಾಷ್ ಲೀಗ್ (Big Bash League - BBL)ನ 2023-24ರ ಆವೃತ್ತಿಯ ಹೊಸ ಸ್ವರೂಪ ಮತ್ತು ಪಂದ್ಯಗಳ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿದೆ. ಬಿಗ್ ಬ್ಯಾಷ್ ಲೀಗ್​ ಒಂದು ವಾರ ಮುಂಚಿತವಾಗಿಯೇ ಆರಂಭವಾಗಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್​)ನಂತೆಯೇ ನಾಲ್ಕು ಪ್ಲೇಆಫ್ ಪಂದ್ಯಗಳು ಇರಲಿವೆ.

ಡಿಸೆಂಬರ್ 7ರಂದು ಬಿಗ್ ಬ್ಯಾಷ್ ಲೀಗ್‌ನ 13ನೇ ಸೀಸನ್‌ ಶುರುವಾಗಲಿದ್ದು, ಒಟ್ಟು 40 ಪಂದ್ಯಗಳು ನಡೆಯಲಿವೆ. ಕಳೆದ ವರ್ಷದ ಫೈನಲಿಸ್ಟ್‌ಗಳಾದ ಬ್ರಿಸ್ಬೇನ್ ಹೀಟ್ ಹಾಗೂ ಮೆಲ್ಬೋರ್ನ್ ಸ್ಟಾರ್ಸ್ ಡಿ.7ರಂದು ಗಬ್ಬಾದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 2024ರ ಜನವರಿ 24ರಂದು ಫೈನಲ್ ಪಂದ್ಯ ನಡೆಯಲಿದೆ. ಇದರ ನಡುವೆ ಆರಂಭಿಕ ಏಳು ಪಂದ್ಯಗಳ ನಂತರ ಡಿ.14ರಿಂದ 18ರವರೆಗೆ ಟೂರ್ನಿಗೆ ವಿರಾಮ ಇರಲಿದೆ. ಯಾಕೆಂದರೆ, ಪರ್ತ್‌ ಮೈದಾನದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ನಡೆಯಲಿದೆ. ಡಿ.19ರಿಂದ ಎಂಟನೇ ಪಂದ್ಯದೊಂದಿಗೆ ಟೂರ್ನಿ ಪುನರಾರಂಭವಾಗುತ್ತದೆ.

ಇದನ್ನೂ ಓದಿ:MS Dhoni :ಹೈದರಾಬಾದ್​ನಲ್ಲಿ ಕ್ಯಾಪ್ಟನ್ ಕೂಲ್​ ಧೋನಿ ಹುಟ್ಟುಹಬ್ಬಕ್ಕೆ ​52 ಅಡಿ ಕಟೌಟ್.. ಮುಂಗಡ​ ಉಡುಗೊರೆ ನೀಡಿದ ಫ್ಯಾನ್ಸ್​

ಹೊಸ ಸ್ವರೂಪದ ಪ್ರಕಾರ, ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ಮೊದಲು ಪ್ರತಿ ತಂಡವು ಈಗ 10 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ಲೇಆಫ್ಸ್ ಹಂತವು ಫೈನಲ್ ಸೇರಿದಂತೆ ನಾಲ್ಕು ಪಂದ್ಯಗಳನ್ನು ಒಳಗೊಂಡಿದೆ. ಅಂತಿಮ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಸ್ಥಾನಕ್ಕಾಗಿ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ನಾಕೌಟ್‌ನಲ್ಲಿ ಭಾಗವಹಿಸಲಿವೆ. ನಾಕೌಟ್‌ನ ವಿಜೇತ ತಂಡವು ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಜೊತೆ ಚಾಲೆಂಜರ್‌ ಪಂದ್ಯ ಆಡಲಿವೆ. ಚಾಲೆಂಜರ್‌ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ಗೆ ಪ್ರವೇಶ ಪಡೆಯಲಿದೆ.

ಈ ಹಿಂದಿನ ಬಿಗ್ ಬ್ಯಾಷ್ ಲೀಗ್‌ನ ಟೂರ್ನಿಗಳಲ್ಲಿ ಪ್ಲೇಆಫ್‌ಗಳು ಒಟ್ಟು ಐದು ತಂಡಗಳನ್ನು ಒಳಗೊಂಡಿತ್ತು. ಅಂದರೆ ಟೂರ್ನಿಯು ನಾಕೌಟ್ ಹಂತದಲ್ಲಿ ಒಟ್ಟು ಐದು ಪಂದ್ಯಗಳು ಆಡಲಾಗುತ್ತಿತ್ತು. ಬಿಗ್ ಬ್ಯಾಷ್ ಲೀಗ್‌ನ ಜನರಲ್ ಮ್ಯಾನೇಜರ್ ಅಲಿಸ್ಟೈರ್ ಡಾಬ್ಸನ್ ಪ್ರತಿಕ್ರಿಯಿಸಿ, ಈ ಆವೃತ್ತಿಯಲ್ಲಿ ಹೊಸ ಸ್ವರೂಪದ ಬಿಬಿಎಲ್​ ಪಂದ್ಯಗಳನ್ನು ಪ್ರಸ್ತುತಪಡಿಸಲು ಉತ್ಸುಕರಾಗಿದ್ದೇವೆ. ಬೇಸಿಗೆಯ ಅವಧಿಯಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಅಲ್ಲದೇ, ಶಾಲಾ ರಜಾ ದಿನಗಳಲ್ಲಿ ಪ್ರೈಮ್ ಟೈಮ್ ಫೈನಲ್​ನೊಂದಿಗೆ ಟೂರ್ನಿ ಕೊನೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಮಹಿಳೆಯರ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ಒಂಬತ್ತನೇ ಆವೃತ್ತಿಯ ವೇಳಾಪಟ್ಟಿಯ ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಇದರ ವಿವರಗಳನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:22 ಬೌಂಡರಿ, 4 ಸಿಕ್ಸರ್ ಸಹಿತ​ 154 ರನ್​ ... ಬಿಬಿಎಲ್​ನಲ್ಲಿ ಮ್ಯಾಕ್ಸ್​ವೆಲ್ ದಾಖಲೆಗಳ ಸುರಿಮಳೆ

ABOUT THE AUTHOR

...view details