ದುಬೈ(ಯುಎಇ): ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣ ಸಹಜ ಬೆಳವಣಿಗೆ. ಇದೀಗ ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅಂಥದ್ದೊಂದು ಸಾಧನೆ ಕಂಡುಬಂದಿದೆ. ಟೀಂ ಇಂಡಿಯಾ ಸ್ವಿಂಗ್ ಕಿಂಗ್ ಖ್ಯಾತಿಯ ಭುವನೇಶ್ವರ್ ಕುಮಾರ್ ಅಪರೂಪದ ಹೊಸ ದಾಖಲೆ ಬರೆದರು.
ಏಷ್ಯಾ ಕಪ್ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಭುವಿ ನಿನ್ನೆಯ ಪಂದ್ಯದಲ್ಲಿ ಬೆಂಕಿಯಂತೆ ಬೌಲಿಂಗ್ ಮಾಡಿದ್ದಾರೆ. ತಾವು ಎಸೆದ 4 ಓವರ್ಗಳಲ್ಲಿ ಕೇವಲ 4 ರನ್ ನೀಡಿದ್ರು. ಅಷ್ಟೇ ಏಕೆ?, ಪ್ರಮುಖ 5 ವಿಕೆಟ್ ಕಿತ್ತರು. ಇಷ್ಟಕ್ಕೆ ಮುಗಿದಿಲ್ಲ, 1 ಓವರ್ ಮೆಡನ್ ಕೂಡಾ ಮಾಡಿದ್ದಾರೆ. ಇದರ ಜೊತೆಗೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತೀಯ ಬೌಲರ್ವೊಬ್ಬ ಕೇವಲ 1ರ ಎಕಾನಮಿಯಲ್ಲಿ ರನ್ ನೀಡಿರುವ ದಾಖಲೆಯೂ ಭುವಿ ಬತ್ತಲಿಕೆ ಸೇರಿತು.
ಕೆನಡಾದ ಸಾದ್ ಬಿನ್ ಜಾಫರ್ ಪನಾಮ ತಂಡದ ವಿರುದ್ಧದ ಪಂದ್ಯದಲ್ಲಿ ತಾವು ಎಸೆದ 4 ಓವರ್ಗಳಲ್ಲಿ ಯಾವುದೇ ರನ್ ನೀಡದೇ 2 ವಿಕೆಟ್ ಪಡೆದುಕೊಂಡಿರುವುದು ಇದುವರೆಗಿನ ಅಂತಾರಾಷ್ಟ್ರೀಯ ಕ್ರಿಕೆಟ್ ದಾಖಲೆಯಾಗಿದೆ.