ಬೆಂಗಳೂರು: 2021-22ರ ರಣಜಿ ಟ್ರೋಫಿಯ ನಾಕೌಟ್ ಪಂದ್ಯಗಳು ಜೂನ್ 4 ರಿಂದ 8ರವರೆಗೆ ಬೆಂಗಳೂರಿನ ಆತಿಥ್ಯದಲ್ಲಿ ನಡೆಯಲಿವೆ. ಕರ್ನಾಟಕ ತಂಡ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ನಂತರ ರಣಜಿ ಟ್ರೋಫಿ ಪುನರಾರಂಭಗೊಳ್ಳಲಿದೆ. ಈ ಟೂರ್ನಿಗೆ ಕ್ವಾರಂಟೈನ್ ಅವಶ್ಯಕತೆಯಿಲ್ಲ, ಆದರೆ ಆಟಗಾರರು ಬಯೋಬಬಲ್ನ ಇಲ್ಲಿರಬೇಕಾಗುತ್ತದೆ. ಬೆಂಗಳೂರಿಗೆ ಆಗಮಿಸುವ ಮುನ್ನ ಎಂದು ಆರ್ಟಿಪಿಸಿಆರ್ ನೆಗೆಟಿವ್ ಒಪ್ಪಿಸಬೇಕೆಂದು ತಿಳಿಸಿದೆ.
ನಾಲ್ಕು ಕ್ವಾರ್ಟರ್ ಫೈನಲ್ ಜೂನ್ 4ರಿಂದ 8 ರವರೆಗೆ ನಡೆಯಲಿದ್ದು, ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬೆಂಗಾಲ್ ತಂಡ ಜಾರ್ಖಂಡ್ ತಂಡವನ್ನು ಎದುರಿಸಲಿದೆ. 2ನೇ ಕ್ವಾರ್ಟರ್ ಫೈನಲ್ನಲ್ಲಿ 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ಮತ್ತು ಉತ್ತರಾಖಂಡ, 3ನೇ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕ ಮತ್ತು ಉತ್ತರ ಪ್ರದೇಶ ಹಾಗೂ ಪಂಜಾಬ್ ಮತ್ತು ಮಧ್ಯಪ್ರದೇಶ ತಂಡಗಳು 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೆಣಸಾಡಲಿವೆ.