ಕರ್ನಾಟಕ

karnataka

ETV Bharat / sports

ಮುಂಬರುವ ಐಪಿಎಲ್​ನಿಂದ ಬೆನ್​ ಸ್ಟೋಕ್ಸ್​ ದೂರ, ಓಕೆ ಎಂದ ಸಿಎಸ್​ಕೆ - ಇಂಗ್ಲೆಂಡ್‌ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್

Ben Stokes to miss IPL-2024: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್-2024ರಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

Ben Stokes to miss IPL 2024  confirms Chennai Super Kings  Engaland team captain ben stokes  ಮುಂಬರುವ ಐಪಿಎಲ್​ನಿಂದ ಬೆನ್​ ಸ್ಟೋಕ್ಸ್​ ದೂರ  ಓಕೆ ಎಂದ ಸಿಎಸ್​ಕೆ  ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್  ಇಂಡಿಯನ್ ಪ್ರೀಮಿಯರ್ ಲೀಗ್ 2024  ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್  ಕೆಲಸದ ನಿರ್ವಹಣೆ ಮತ್ತು ಫಿಟ್‌ನೆಸ್‌  ಇಂಗ್ಲೆಂಡ್‌ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್  ಸ್ಟೋಕ್ಸ್‌ಗೆ ವಿಶೇಷವಾಗಿರಲಿಲ್ಲ ಈ ಬಾರಿಯ ವಿಶ್ವಕಪ್
ಮುಂಬರುವ ಐಪಿಎಲ್​ನಿಂದ ಬೆನ್​ ಸ್ಟೋಕ್ಸ್​ ದೂರ, ಓಕೆ ಎಂದ ಸಿಎಸ್​ಕೆ

By PTI

Published : Nov 24, 2023, 8:51 AM IST

ಚೆನ್ನೈ(ತಮಿಳುನಾಡು): ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಕೆಲಸದ ಹೊರೆ ಮತ್ತು ಫಿಟ್​ನೆಸ್​ ಕಾರಣ ನೀಡಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌​ನಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ ಎಂದು ತಿಳಿಸಿರುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಗುರುವಾರ ಖಚಿತಪಡಿಸಿದೆ. ಸ್ಟೋಕ್ಸ್ ಐಪಿಎಲ್ 2023ರ ಮೊದಲು ಸಿಎಸ್‌ಕೆ ಸೇರಿದ್ದರು. ಆದರೆ ಮೊಣಕಾಲಿನ ಗಾಯದಿಂದಾಗಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಭಾಗವಹಿಸಿ, ನಿರ್ಗಮಿಸಿದ್ದರು.

ಬೆನ್‌ ನಿರ್ಧಾರವನ್ನು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಒಪ್ಪಿಕೊಂಡಿದೆ. ಐಪಿಎಲ್‌ಗೆ ಮೊದಲು ಇಂಗ್ಲೆಂಡ್ ತಂಡವು ಭಾರತದಲ್ಲಿ ಐದು ಟೆಸ್ಟ್‌ಗಳ ಪಂದ್ಯಗಳ ಸರಣಿ ಮತ್ತು ಜೂನ್‌ನಲ್ಲಿ ಟಿ20 ವಿಶ್ವಕಪ್ ಆಡಬೇಕಿದೆ. ಹೀಗಾಗಿ ಅವರ ನಿರ್ಧಾರಕ್ಕೆ ನಮ್ಮ ಸಹಮತವಿದೆ ಎಂದು ಸಿಎಸ್‌ಕೆ ತನ್ನ ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಿದೆ.

2023ರ ಐಪಿಎಲ್​ ಬಿಡ್​ನಲ್ಲಿ 16 ಕೋಟಿ 25 ಲಕ್ಷ ರೂಗಳಿಗೆ ಸಿಎಸ್‌ಕೆ ಸ್ಟೋಕ್ಸ್‌ರನ್ನು ಖರೀದಿಸಿತ್ತು. ಈ ಸೀಸನ್‌ನಲ್ಲಿ ಎರಡು ಪಂದ್ಯಗಳಲ್ಲಿ 15 ರನ್ ಗಳಿಸಿ, ಒಂದು ಓವರ್ ಬೌಲ್ ಮಾಡಿದ್ದರು. ನಂತರದಲ್ಲಿ ವಿಶ್ವಕಪ್‌ಗಾಗಿ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಅವರು ಬದಲಾಯಿಸಿದ್ದರು. ಆದರೆ ಈ ಬಾರಿಯ ವಿಶ್ವಕಪ್​ನಲ್ಲಿ ನಿರಾಶಾದಾಯಕ ಪ್ರದರ್ಶನದ ನೀಡಿದ ಇಂಗ್ಲೆಂಡ್ ಏಳನೇ ಸ್ಥಾನ ಪಡೆಯಿತು. ಸ್ಟೋಕ್ಸ್ ಲೀಗ್ ಹಂತದ ಮೊದಲ ಮೂರು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ನಂತರದ ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದರು. ಆರು ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ ಎಂಬುದು ಗಮನಾರ್ಹ.

ಬೆನ್ ಸ್ಟೋಕ್ಸ್​ಗೆ ಈ ಬಾರಿಯ ವಿಶ್ವಕಪ್ ವಿಶೇಷವಾಗಿರಲಿಲ್ಲ. ಕಳಪೆ ಫಿಟ್ನೆಸ್​ನಿಂದಾಗಿ 6 ​​ಪಂದ್ಯಗಳಿಗೆ ಮಾತ್ರ ಮೈದಾನಕ್ಕೆ ಬಂದಿದ್ದರು. ಹೀಗಿದ್ದರೂ 304 ರನ್ ಗಳಿಸಿ ತಂಡದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.

ಇದನ್ನೂ ಓದಿ:ಕಿಶನ್​, ಸೂರ್ಯ ಭರ್ಜರಿ ಬ್ಯಾಟಿಂಗ್​: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 2 ವಿಕೆಟ್​ಗಳ ರೋಚಕ ಜಯ

ABOUT THE AUTHOR

...view details