ಕರ್ನಾಟಕ

karnataka

ETV Bharat / sports

ಐದು ತಿಂಗಳ ಬಳಿಕ ಕ್ರಿಕೆಟ್​ಗೆ ಮರಳಿದ ಎರಡೇ ದಿನದಲ್ಲಿ ಗಾಯಕ್ಕೆ ತುತ್ತಾದ ಬೆನ್​ ಸ್ಟೋಕ್ಸ್​ - ಮಂಡಿ ನೋವಿಗೆ ತುತ್ತಾದ ಬೆನ್​ ಸ್ಟೋಕ್ಸ್

29ನೇ ಓವರ್​ ವೇಳೆ ಬೌಂಡರಿಯತ್ತ ಹೋಗುತ್ತಿದ್ದ ಚೆಂಡನ್ನು ತಡೆಯುವ ಪ್ರಯತ್ನದ ವೇಳೆ ಬೆನ್​ ಸ್ಟೋಕ್ಸ್ ಮಂಡಿ ನೋವಿಗೆ ತುತ್ತಾಗಿದ್ದಾರೆ. ಅವರು ಇಡೀ ದಿನ ಮೈದಾನದಲ್ಲಿ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದ ಕಾರಣ, ವೈದ್ಯಕೀಯ ಸಿಬ್ಬಂದಿ ತಂಡ ರಾತ್ರಿಯೇ ಅವರನ್ನು ಮೌಲ್ಯಮಾಪನ ಮಾಡಲಿದೆ ಎಂದು ಇಂಗ್ಲೆಂಡ್ ಬೌಲಿಂಗ್ ಕೋಚ್ ಜಾನ್ ಲೂಯಿಸ್​ ಹೇಳಿದ್ದಾರೆಂದು ಇಎಸ್​ಪಿಎನ್ ವರದಿ ಮಾಡಿದೆ.

Ben Stokes suffers knee injury, medical staff to assess him overnight
ಬೆನ್​ ಸ್ಟೋಕ್ಸ್​ಗೆ ಗಾಯ

By

Published : Dec 9, 2021, 8:33 PM IST

ಬ್ರಿಸ್ಬೇನ್: 5 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದ ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮೊದಲ ಅ್ಯಶಸ್​ ಟೆಸ್ಟ್​ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. 2ನೇ ದಿನದಾಟದಲ್ಲಿ ಫೀಲ್ಡಿಂಗ್​ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

29ನೇ ಓವರ್​ ವೇಳೆ ಬೌಂಡರಿಯತ್ತ ಹೋಗುತ್ತಿದ್ದ ಚೆಂಡನ್ನು ತಡೆಯುವ ಪ್ರಯತ್ನದ ವೇಳೆ ಬೆನ್​ ಸ್ಟೋಕ್ಸ್ ಮಂಡಿ ನೋವಿಗೆ ತುತ್ತಾಗಿದ್ದಾರೆ. ಅವರು ಇಡೀ ದಿನ ಮೈದಾನದಲ್ಲಿ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಂಡುಬಂದ ಕಾರಣ, ವೈದ್ಯಕೀಯ ಸಿಬ್ಬಂದಿ ತಂಡ ರಾತ್ರಿಯೇ ಅವರನ್ನು ಮೌಲ್ಯಮಾಪನ ಮಾಡಲಿದೆ ಎಂದು ಇಂಗ್ಲೆಂಡ್ ಬೌಲಿಂಗ್ ಕೋಚ್ ಜಾನ್ ಲೂಯಿಸ್​ ಹೇಳಿದ್ದಾರೆಂದು ಇಎಸ್​ಪಿಎನ್ ವರದಿ ಮಾಡಿದೆ.

ಪಂದ್ಯದ ಬಗ್ಗೆ ಮಾತನಾಡಿ, ಪಂದ್ಯದ ಕೊನೆಯ ಸೆಷನ್​ವರೆಗೂ ಆಡುವುದಕ್ಕೆ ನಾವು ತಯಾರಿ ಮಾಡಿಕೊಂಡಿದ್ದೇವೆ. ಆಟಗಾರರೆಲ್ಲರೂ ನಾಳೆ ಮುಂದೆ ಬರುತ್ತಾರೆ ಎಂದು ನನಗೆ ತಿಳಿದಿದೆ. ಈ ಹಿಂದೆ ಅವರು ಇಂತಹ ಸಂದರ್ಭಗಳನ್ನು ಎದುರಿಸಿದ್ದಾರೆ. ತಮ್ಮನ್ನು ತಾವೂ ಹುರಿದುಂಬಿಸಿಕೊಂಡು ಪಂದ್ಯಕ್ಕೆ ಮರಳಲಿದ್ದಾರೆ ಎಂದು ಲೂಯಿಸ್ ಹೇಳಿದ್ದಾರೆ.

ಪಂದ್ಯಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್​ ಅತಿಥೇಯರ ಬೌಲಿಂಗ್ ದಾಳಿಗೆ ಸಿಲುಕಿ ಕೇಲವ 147 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ಇದಕ್ಕುತ್ತರವಾಗಿ 2ನೇ ದಿನ ಬ್ಯಾಟಿಂಗ್ ಮಾಡಿದ ಆಸೀಸ್​ 7 ವಿಕೆಟ್ ಕಳೆದುಕೊಂಡು 343 ರನ್​ಗಳಿಸಿದೆ. ಡೇವಿಡ್​ ವಾರ್ನರ್ 94 ರನ್​ಗಳಿಸಿದರೆ, ಟ್ರಾವಿಸ್​ ಹೆಡ್​ ಅಜೇಯ 112 ರನ್​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಆಸ್ಟ್ರೇಲಿಯಾ 196 ರನ್​ಗಳ ಮೊದಲ ಇನ್ನಿಂಗ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ:ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್​ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್​

ABOUT THE AUTHOR

...view details