ಕರ್ನಾಟಕ

karnataka

ETV Bharat / sports

ಭಾರತವನ್ನು ಟಿ20 ವಿಶ್ವಕಪ್​ನಲ್ಲಿ ಮಣಿಸಿದ್ದು 2021ರ ಪಾಕಿಸ್ತಾನಕ್ಕೆ ಸರ್ವಶ್ರೇಷ್ಠ ಕ್ಷಣ: ಬಾಬರ್​

ಭಾರತವನ್ನು ವಿಶ್ವಕಪ್​​ ನಲ್ಲಿ ಮೊದಲ ಬಾರಿಗೆ ಮಣಿಸುವ ಮೂಲಕ ಇಷ್ಟು ವರ್ಷಗಳ ಸೋಲಿನ ಸರಪಳಿಯನ್ನು ಕಡಿದು ಹಾಕಿದ್ದು ಪಾಕಿಸ್ತಾನ ಕ್ರಿಕೆಟ್​ 2021ರ ಅತ್ಯಂತ ಸ್ಮರಣೀಯ ಕ್ಷಣ ಎಂದು ನಾಯಕ ಬಾಬರ್​ ಹೇಳಿದ್ದಾರೆ.

By

Published : Jan 1, 2022, 7:55 PM IST

Beating India in T20 World Cup best moment of 2021 for Pak team
ಟಿ20 ವಿಶ್ವಕಪ್ ಪಾಕಿಸ್ತಾನ - ಭಾರತ

ಕರಾಚಿ: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಮಣಿಸಿದ್ದು 2021ರಲ್ಲಿ ಪಾಕಿಸ್ತಾನ ತಂಡದ ಅತ್ಯಂತ ಮಹತ್ವದ ಕ್ಷಣ ಎಂದು ಹೇಳಿದ್ದಾರೆ.

ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿರುವ ಪೋಡ್​ಕಾಸ್ಟ್​ನಲ್ಲಿ ಟಿ20 ವಿಶ್ವಕಪ್​ ಸೆಮಿಫೈನಲ್​​ನಲ್ಲಿ ಸೋಲು ಕಂಡಿದ್ದು ಇಡೀ ತಂಡಕ್ಕೆ ಅತ್ಯಂತ ಬೇಸರ ಕ್ಷಣ ಎಂದು ಬಾಬರ್ ಹೇಳಿದ್ದಾರೆ.

"ಈ ಸೋಲು ನನ್ನನ್ನು ಅಂತ್ಯಂತ ಹೆಚ್ಚು ನೋವುಂಟು ಮಾಡಿತು. ಏಕೆಂದರೆ ನಾವು ಇಡೀ ತಂಡವಾಗಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದೆವು" ಎಂದು ಅವರು ಹೇಳಿದ್ದಾರೆ.

ಆದರೆ ಭಾರತವನ್ನು ವಿಶ್ವಕಪ್​​ ನಲ್ಲಿ ಮೊದಲ ಬಾರಿಗೆ ಮಣಿಸುವ ಮೂಲಕ ಇಷ್ಟು ವರ್ಷಗಳ ಸೋಲಿನ ಸರಪಳಿಯನ್ನು ಕಡಿದು ಹಾಕಿದ್ದು ಪಾಕಿಸ್ತಾನ ಕ್ರಿಕೆಟ್​ಗೆ​ 2021 ಅತ್ಯಂತ ಸ್ಮರಣೀಯ ಕ್ಷಣ ಎಂದಿದ್ದಾರೆ.

"ತಂಡವಾಗಿ ನಮಗೆ ಇದು ಒಂದು ಅತ್ಯುತ್ತಮ ಸಾಧನೆ. ಏಕೆಂದರೆ ವಿಶ್ವಕಪ್​ ಇತಹಾಸದಲ್ಲಿ ಹಲವಾರು ವರ್ಷಗಳಿಂದ ಭಾರತವನ್ನು ನಮ್ಮಿಂದ ಸೋಲಿಸಲು ಆಗಿರಲಿಲ್ಲ. ಹಾಗಾಗಿ ಇದು ಈ ವರ್ಷದ ಅತ್ಯುತ್ತಮ ಸಾಧನೆ. ನಮಗೆ ಈ ಗೆಲುವು ಪಾಕಿಸ್ತಾನ ತಂಡದ ಘನತೆಯನ್ನು ಹಾಗೂ ಆಟಗಾರರ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ನೀಡಿದ್ದ 152 ರನ್​ಗಳ ಗುರಿಯನ್ನು ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ ತಲುಪುವ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಮೊದಲ ಜಯ ಸಾಧಿಸಿತ್ತು.

ಇದನ್ನೂ ಓದಿ:ಇಂಗ್ಲೆಂಡ್​ನಲ್ಲಿ ಟೆಸ್ಟ್​ ಕ್ರಿಕೆಟ್​ ಉಳಿಯಬೇಕಾದರೆ ಈ ರೀತಿ ಲೀಗ್ ಆರಂಭಿಸಿ : ಇಸಿಬಿಗೆ ಕೆವಿನ್ ಪೀಟರ್ಸನ್ ಸಲಹೆ

ABOUT THE AUTHOR

...view details