ನವದೆಹಲಿ:ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಲೈಂಗಿಕ ದೌರ್ಜನ್ಯ ತಡೆಯಲು ತನ್ನದೇ ಆದ ಲೈಂಗಿಕ ಕಿರುಕಳ ತಡೆ ನೀತಿ( Prevention of Sexual Harassment )ಗೆ ಅನುಮೋದನೆ ನೀಡಿದೆ.
ಇಲ್ಲಿಯವರೆಗೆ, ಲೈಂಗಿಕ ಕಿರುಕುಳದ ವಿಚಾರಗಳನ್ನು ನಿಭಾಯಿಸುವ ಯಾವುದೇ ನಿರ್ದಿಷ್ಟ ನೀತಿ ಮಂಡಳಿಗೆ ಇರಲಿಲ್ಲ. ಇದೀಗ ಜಾರಿಗೆ ತಂದಿರುವ ಈ POSH ನೀತಿ ಕ್ರಿಕೆಟಿಗರ ಜೊತೆಗೆ ಆಡಳಿತ ಮಂಡಳಿ, ಅಫೆಕ್ಸ್ ಕೌನ್ಸಿಲ್ ಸದಸ್ಯರು ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್ಗೂ ಅನ್ವಯವಾಗಲಿದೆ.
ಲೈಂಗಿಕ ಕಿರುಕುಳ ದೂರುಗಳ ತನಿಖೆಗಾಗಿ ನಾಲ್ಕು ಸದಸ್ಯರ ಆಂತರಿಕ ಸಮಿತಿಯನ್ನು ರಚಿಸಲಾಗುವುದು ಎಂದು ಬಿಸಿಸಿಐ ಹೇಳಿದೆ. ಸೋಮವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಆ ಸದಸ್ಯರನ್ನು ಆಯ್ಕೆ ಮಾಡಲಿಲ್ಲ. ಈ ಆಂತರಿಕ ಸಮಿತಿ ಅಧಿಕಾರಿಯಾಗುವವರು ಉನ್ನತ ದರ್ಜೆಯ ಉದ್ಯೋಗಿರುವ ಮಹಿಳೆಯಾಗಿರಬೇಕು ಎಂದು ಬಿಸಿಸಿಐನ ಹೊಸ ನೀತಿ ಹೇಳಿದೆ.