ನವದೆಹಲಿ:ಶನಿವಾರ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ (ಎಸ್‌ಜಿಎಂ) ಯುಎಇನಲ್ಲಿ ಐಪಿಎಲ್ ಅನ್ನು ಪುನಾರಂಭಿಸಲು ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿದ್ದಾರೆ. ಸೆಪ್ಟೆಂಬರ್ 3ನೇ ವಾರದಲ್ಲಿ ನಗದು ಸಮೃದ್ಧ ಲೀಗ್ ನಡೆಯಲಿದೆ.
ಇದೇ ಸಭೆಯಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಆತಿಥ್ಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಬಳಿ ಒಂದು ತಿಂಗಳ ಸಮಯಾವಕಾಶ ಕೇಳುವ ನಿರ್ಧಾರಕ್ಕೂ ಬಿಸಿಸಿಐ ಎಸ್‌ಜಿಎಂ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ತಿಳಿದು ಬಂದಿದೆ.
"ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯೆ ಐಪಿಎಲ್ ಪುನಾರಂಭಿಸುವ ನಿರ್ಧಾರಕ್ಕೆ ಎಸ್‌ಜಿಎಂ ಒಪ್ಪಿಗೆ ಸೂಚಿಸಿದೆ. ನಿರ್ದಿಷ್ಟ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು" ಎಂದು ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಸೀನಿಯರ್ ಸ್ಟೇಟ್ ಬೋರ್ಡ್ ಸದಸ್ಯರೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
"ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ಮಾನ್ಸೂನ್ ಸಮಯವಾಗಿದೆ. ಹಾಗಾಗಿ, 2020ರಲ್ಲಿ ಕಂಡಿರುವಂತೆ ಯುಎಇಯ ಮೂರು ಮೈದಾನಗಳು ನಮಗೆ ಐಪಿಎಲ್ ಪೂರ್ಣಗೊಳಿಸಲು ಸುಲಭವಾಗಿಸುತ್ತವೆ " ಎಂದು ಅವರು ತಿಳಿಸಿದ್ದಾರೆ.
ಟಿ20 ವಿಶ್ವಕಪ್ ಆಯೋಜನೆ ಕುರಿತು ಮಾತನಾಡಿ, "ಎಲ್ಲಾ ಸದಸ್ಯರು ಟಿ20 ವಿಶ್ವಕಪ್ ಭಾರತದಲ್ಲೇ ಆಯೋಜಿಸುವ ಬಯಕೆ ಹೊಂದಿದ್ದಾರೆ.