ನವದೆಹಲಿ:ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 20 ರಂದು ತನ್ನ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಲಿದ್ದು, ಲೈಂಗಿಕ ದೌರ್ಜನ್ಯ ತಡೆ ನೀತಿ ಅಂಗೀಕರಿಸಲಿದೆ. ಜೊತೆಯಲ್ಲಿ ರಣಜಿ ಕ್ರಿಕೆಟಿಗರಿಗೆ ಆರ್ಥಿಕ ನೆರವು ನೀಡುವ ಕುರಿತು ಮತ್ತೊಮ್ಮೆ ಚರ್ಚಿಸಲಿದೆ.
ಇಲ್ಲಿಯವರೆಗೆ, ಲೈಂಗಿಕ ಕಿರುಕುಳದ ದೂರುಗಳನ್ನು ಎದುರಿಸಲು ಮಂಡಳಿಗೆ ನಿರ್ದಿಷ್ಟ ನೀತಿ ಇರಲಿಲ್ಲ. ರಾಹುಲ್ ಜೋಹ್ರಿ ಅವರು ಸಿಇಒ ಆಗಿದ್ದಾರೆ, ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬಂದ ನಂತರ ಬಿಸಿಸಿಐ ಸಮಿತಿಯೊಂದನ್ನು ರಚಿಸಿತ್ತು. ಅಂತಿಮವಾಗಿ ರಾಹುಲ್ ಜೋಹ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ತನ್ನ ಮುಂದಿನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ 'ಲೈಂಗಿಕ ಕಿರುಕುಳ ತಡೆ ನೀತಿ'ಯನ್ನು ಬಿಸಿಸಿಐ ಅಂಗೀಕರಿಸಲಿದೆ.