ಮುಂಬೈ : ಕೊರೊನಾ ವಿರುದ್ಧದ ಹೋರಾಟಕ್ಕೆ ಬಿಸಿಸಿಐ ಕೈ ಜೋಡಿಸಿದ್ದು, 10 ಲೀಟರ್ನ 2000 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ದೇಣಿಗೆ ನೀಡುವುದಾಗಿ ಬಿಸಿಸಿಐ ಸೋಮವಾರ ಘೋಷಿಸಿದೆ.
ಇಡೀ ದೇಶ ಕೋವಿಡ್ -19ನ 2ನೇ ಅಲೆಯಿಂದ ಊಹಿಸಲಾಗದ ರೀತಿಯಲ್ಲಿ ಹಾನಿಗೊಳಗಾಗಿದೆ. ನಿತ್ಯ ಸಾವಿರಾರು ಮಂದಿ ಸಾವೀಗೀಡಾಗುತ್ತಿದ್ದಾರೆ.
ಇದರಲ್ಲಿ ಕೆಲವರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮತ್ತು ಇನ್ನೂ ಕೆಲವರು ಆಕ್ಸಿಜನ್ ಸಿಗದೇ ಸಾವನ್ನಪ್ಪಿದ್ದಾರೆ. ಹಾಗಾಗಿ, ಬಿಸಿಸಿಐ ಮುಂದಿನ ಕೆಲವು ತಿಂಗಳು ಅಗತ್ಯವಿರುವ ರೋಗಿಗಳಿಗೆ ವೈದ್ಯಕೀಯ ನೆರವು ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ಭರವಸೆಯೊಂದಿಗೆ ಭಾರತದಾದ್ಯಂತ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಿಸುವುದಾಗಿ ತಿಳಿಸಿದೆ.
"ಸಾಂಕ್ರಮಿಕ ವೈರಸ್ ವಿರುದ್ಧದ ಈ ಸುದೀರ್ಘ ಯುದ್ಧದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಮುದಾಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂದು ಬಿಸಿಸಿಐ ಒಪ್ಪಿಕೊಂಡಿದೆ.
ಅಲ್ಲದೆ ಅವರು ನಿಜವಾಗಿಯೂ ಮುಂಚೂಣಿಯ ಯೋಧರಾಗಿದ್ದಾರೆ ಮತ್ತು ನಮ್ಮನ್ನು ರಕ್ಷಿಸಲು ಅವರಿಂದಾದಷ್ಟು ಮಾಡಿದ್ದಾರೆ. ಮಂಡಳಿ ಯಾವಾಗಲೂ ಆರೋಗ್ಯ ಮತ್ತು ಸುರಕ್ಷತೆಗೆ ಅಗ್ರಸ್ಥಾನ ನೀಡುತ್ತದೆ. ಮತ್ತು ಅದಕ್ಕೆ ಬದ್ಧವಾಗಿದೆ.
ಹಾಗಾಗಿ, ವೈರಸ್ನಿಂದ ಸಮಸ್ಯೆಗೀಡಾಗಿರುವವರ ತ್ವರಿತ ಚೇತರಿಕೆಗೆ ಸಹಾಯ ಮಾಡಲು ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ನೀಡಲಿ ನಿರ್ಧಿರಿಸಲಾಗಿದೆ ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಬಿಸಿಸಿಐ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಬಿಸಿಸಿಐ 51 ಕೋಟಿ ರೂಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿತ್ತು. ಇದೀಗ 2000 ಆಕ್ಸಿಜನ್ ಕಾಂನ್ಸಂಟ್ರೇಟರ್ ನೀಡಲು ನಿರ್ಧರಿಸಿದೆ. ಮಾರುಕಟ್ಟೆಯು ಬೆಲೆಯನ್ವಯ ಅಂದಾಜಿಸಿದರೆ 25 ರಿಂದ 30 ಕೋಟಿ ವೆಚ್ಚವಾಗುತ್ತದೆ.
ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತೆ ಶುರುವಾಗಲಿದೆ ಐಪಿಎಲ್.. ಉಳಿದ ಪಂದ್ಯಗಳಿಗೆ ಸ್ಥಳ ನಿಗದಿ ಮಾಡಿದ ಬಿಸಿಸಿಐ..ಇದನ್ನು ಓದಿ: