ನವದೆಹಲಿ :2021 ಮತ್ತು 2023ರ ಏಕದಿನ ವಿಶ್ವಕಪ್ ಆತಿಥ್ಯವನ್ನು ಹೊಂದಿರುವ ಭಾರತ ತಂಡ 2024ರಿಂದ 2031ರವರೆಗೆ ನಡೆಯಲಿರುವ ಐಸಿಸಿಯ ಪ್ರಮುಖ 3 ಟೂರ್ನಿಗಳಿಗೆ ಬಿಡ್ ಸಲ್ಲಿಸಲು ನಿರ್ಧರಿಸಿದೆ. ಇದರಲ್ಲಿ ಒಂದು ಚಾಂಪಿಯನ್ಸ್ ಟ್ರೋಫಿ, ಟಿ20 ಮತ್ತು ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡ್ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಭಾನುವಾರ ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ವರ್ಚುವಲ್ ಸಭೆಯಲ್ಲಿ ಚಾಂಪಿಯನ್ ಟ್ರೋಫಿ, ಏಕದಿನ ಮತ್ತು ಟಿ20ಯ ತಲಾ ಒಂದು ವಿಶ್ವಕಪ್ ಆಯೋಜಿಸಲು ತೀರ್ಮಾನಿಸಲಾಗಿದೆ. ಆದರೆ, ಇದು ತೆರಿಗೆ ವಿನಾಯಿತಿಗಳ ಮೇಲೆ ನಿಂತಿದೆ ಎನ್ನಲಾಗಿದೆ. ಏಕೆಂದರೆ, 2016ರ ಟಿ20 ವಿಶ್ವಕಪ್ನಲ್ಲಿ ತೆರಿಗೆ ವಿನಾಯಿತಿ ಪಡೆದಿರಲಿಲ್ಲ. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೂ ತೆರಿಗೆ ವಿನಾಯಿತಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.