ಕರ್ನಾಟಕ

karnataka

ETV Bharat / sports

ವೆಸ್ಟ್​ ಇಂಡೀಸ್ ವಿರುದ್ಧದ 3ನೇ ಟಿ-20 ಪಂದ್ಯಕ್ಕೆ 20 ಸಾವಿರ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ ಬಿಸಿಸಿಐ

ಬಿಸಿಸಿಐ ನಮ್ಮ ಮನವಿ ಪರಿಗಣನೆಗೆ ತೆಗೆದುಕೊಂಡಿರುವುದಕ್ಕೆ ನಮಗೆ ತುಂಬಾ ಖುಷಿಯಾಗುತ್ತಿದೆ. ಮಂಡಳಿಯ ಈ ನಿರ್ಧಾರ ಬೆಂಗಾಲ್​ ಕ್ರಿಕೆಟ್​ನ, ಲೈಫ್ ಅಸೋಸಿಯೇಟ್, ವಾರ್ಷಿಕ ಮತ್ತು ಗೌರವ ಸದಸ್ಯರಿಗೆ ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ " ಎಂದು ದಾಲ್ಮಿಯಾ ಹೇಳಿದ್ದಾರೆ.

BCCI to allow 20,000 odd spectators at Eden for 3rd T20I versus West Indies
ಭಾರತ ವೆಸ್ಟ್​ ಇಂಡೀಸ್​ ಟಿ20 ಸರಣಿ

By

Published : Feb 17, 2022, 7:23 PM IST

ಕೋಲ್ಕತ್ತಾ: ಭಾರತ ಮತ್ತು ವೆಸ್ಟ್​ ಇಂಡೀಸ್ ನಡುವಿನ 3ನೇ ಟಿ-20 ಪಂದ್ಯವನ್ನ ವೀಕ್ಷಿಸಲು 20 ಸಾವಿರ ಪ್ರೇಕ್ಷಕರಿಗೆ ಮತ್ತು ಬೆಂಗಾಲ್ ಕ್ರಿಕೆಟ್​ ಅಸೋಸಿಯೇಷನ್​​ನ ಸದಸ್ಯರಿಗೆ ಬಿಸಿಸಿಐ ಅನುಮತಿ ನೀಡಿದೆ. ಫೆಬ್ರವರಿ 20ರಂದು ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ 3ನೇ ಟಿ-20 ಪಂದ್ಯ ನಡೆಯಲಿದೆ.

ಇತರ ಪದಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ನಿಮ್ಮ ಕೋರಿಕೆಯಂತೆ, ಈಡನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ-20 ಪಂದ್ಯಕ್ಕೆ ನೀವು ಪ್ರೇಕ್ಷಕರಿಗೆ ಅನುವು ಮಾಡಿಕೊಡಬಹುದು" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಿಎಬಿ ಮುಖ್ಯಸ್ಥ ಅವಿಶೇಕ್ ದಾಲ್ಮಿಯಾ ಅವರಿಗೆ ಇ-ಮೇಲ್ ಮೂಲಕ ತಿಳಿಸಿದ್ದಾರೆ. 20 ಸಾವಿರ ಪ್ರೇಕ್ಷಕರ ಜೊತೆಗೆ ಸಿಎಬಿ ತನ್ನ ಅಧಿಕಾರಿಗಳಿ ಮತ್ತು ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಿದೆ.

ಬಿಸಿಸಿಐ ನಮ್ಮ ಮನವಿ ಪರಿಗಣನೆಗೆ ತೆಗೆದುಕೊಂಡಿರುವುದಕ್ಕೆ ನಮಗೆ ತುಂಬಾ ಖುಷಿಯಾಗುತ್ತಿದೆ. ಮಂಡಳಿಯ ಈ ನಿರ್ಧಾರ ಬೆಂಗಾಲ್​ ಕ್ರಿಕೆಟ್​ನ, ಲೈಫ್ ಅಸೋಸಿಯೇಟ್, ವಾರ್ಷಿಕ ಮತ್ತು ಗೌರವ ಸದಸ್ಯರಿಗೆ ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ " ಎಂದು ದಾಲ್ಮಿಯಾ ಹೇಳಿದ್ದಾರೆ.

ಏಕದಿನ ಸರಣಿ ಮುಗಿಯುತ್ತಿದ್ದಂತೆ ದಾಲ್ಮಿಯಾ ಟಿ20 ಸರಣಿಗೆ ಶೇ.70ರಷ್ಟು ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು. ಕಳೆದ ನವೆಂಬರ್​​ನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್​ ಮತ್ತು ಭಾರತ ಟಿ-20 ಪಂದ್ಯಕ್ಕೂ ಶೇ. 70 ರಷ್ಟು ಪ್ರೇಕ್ಷಕರಿಗೆ ಬಿಸಿಸಿಐ ಅನುಮತಿ ಕಲ್ಪಿಸಿತ್ತು.

ಇದನ್ನೂ ಓದಿ:ಶ್ರೀಲಂಕಾ ಸರಣಿಗೂ ಮುನ್ನ ಶತಕ ಸಿಡಿಸಿ ಫಾರ್ಮ್​ಗೆ ಮರಳಿದ ಅಜಿಂಕ್ಯ ರಹಾನೆ

ABOUT THE AUTHOR

...view details