ನವದೆಹಲಿ :ಕೊರೊನಾದಿಂದಾಗಿ ಅಮಾನತುಗೊಂಡಿರುವ ಐಪಿಎಲ್ ಟೂರ್ನಿ ಯುಎಇಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ನಾಳೆಯ ಸಭೆಯಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ.
ಸೆಪ್ಟೆಂಬರ್ 15 ಮತ್ತು ಅಕ್ಟೋಬರ್ 15ರ ನಡುವೆ ಮೂರು ವಾರಗಳ ನಡುವೆ ಟೂರ್ನಿ ನಡೆಸಲು ಈಗಾಗಲೇ ನಿರ್ಧರಿಸಲಾಗಿದ್ದು, ನಾಳೆ ಅಧಿಕೃತವಾಗಿ ಘೋಷಣೆಯಾಗಲಿದೆ.
ಇದೇ ವೇಳೆ ಟಿ-20 ವಿಶ್ವಕಪ್ ಕುರಿತು ಸಹ ಚರ್ಚೆಯಾಗುವ ಸಾಧ್ಯತೆ ಇದ್ದು, ಐಪಿಎಲ್ ಮರು ಆಯೋಜನೆ ಬಗ್ಗೆ ನಾಳೆ ನಡೆಯಲಿರುವ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈಗಾಗಲೇ ಭಾರತದಲ್ಲಿ ಅರ್ಧ ಟೂರ್ನಿ ಮುಗಿದಿದ್ದು, ಇನ್ನೂ 31 ಪಂದ್ಯಗಳು ಬಾಕಿ ಉಳಿದಿವೆ. 3 ವಾರಗಳ ಕಾಲ ನಡೆಯಲಿರುವ ಈ ಆವೃತ್ತಿಯ ದ್ವಿತೀಯಾರ್ಧದಲ್ಲಿ, 10 ಡಬಲ್ ಹೆಡರ್ ಪಂದ್ಯಗಳು ಹಾಗೂ 7 ಸಿಂಗಲ್ ಹೆಡರ್ ಪಂದ್ಯ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
ಬಿಸಿಸಿಐ ಭಾರತದಲ್ಲಿ ಟಿ-20 ವಿಶ್ವಕಪ್ ಅನ್ನು ಆಯೋಜಿಸಲು ಬಯಸಿದೆ ಮತ್ತು ಜೂನ್ 1ರ ಐಸಿಸಿ ಮಂಡಳಿಯ ಸಭೆಯಲ್ಲಿ, ಯಾವುದೇ ನಿರ್ಣಯಕ್ಕೆ ಬರುವ ಮೊದಲು ಇಲ್ಲಿನ ಕೋವಿಡ್ ಪರಿಸ್ಥಿತಿ ಅವಲೋಕಿಸಲು ಐಸಿಸಿಗೆ ಸೂಚಿಸಲಿದೆ.
ನಿಸ್ಸಂಶಯವಾಗಿ ಈ ಸಭೆಯ ಮುಖ್ಯ ವಿಷಯವೆಂದರೆ ಐಪಿಎಲ್ ವೇಳಾಪಟ್ಟಿ. ಫೈನಲ್ ಸೇರಿದಂತೆ ನಾಲ್ಕು ಪ್ಲೇ-ಆಫ್ ಆಟಗಳನ್ನು (2 ಕ್ವಾಲಿಫೈಯರ್ಗಳು, ಒಂದು ಎಲಿಮಿನೇಟರ್) ಹೊರತುಪಡಿಸಿ 10 ಡಬಲ್-ಹೆಡರ್ ಮತ್ತು 7 ಸಿಂಗಲ್ ಹೆಡರ್ ಪಂದ್ಯಗಳ ನಾವು ನಿರೀಕ್ಷಿಸುತ್ತಿದ್ದೇವೆ.