ಮುಂಬೈ (ಮಹಾರಾಷ್ಟ್ರ): ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ 19 ವರ್ಷದೊಳಗಿನ ವನಿತೆಯರ ತಂಡಕ್ಕೆ ಭಾರತೀಯ ನಿಯಂತ್ರಣ ಕ್ರಿಕೆಟ್ ಮಂಡಳಿ (ಬಿಸಿಸಿಐ) ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಫೆಬ್ರವರಿ 1ರಂದು ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂಡರ್ 19 ಮಹಿಳಾ ತಂಡವನ್ನು ಭಾರತದ ದಿಗ್ಗಜ ಕ್ರಿಕೆಟಿಗ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಪದಾಧಿಕಾರಿಗಳು ಸನ್ಮಾನಿಸಲಿದ್ದಾರೆ.
ಜನವರಿ 29ರಂದು ನಡೆದ ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನ ಸೆನ್ವೆಸ್ ಪಾರ್ಕ್ನಲ್ಲಿ ನಡೆದ ಅಂಡರ್ -19 ಮಹಿಳಾ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತೀಯ ವನಿತೆಯರ ತಂಡವು 7 ವಿಕೆಟ್ಗಳ ಅಂತರದಿಂದ ಭರ್ಜರಿ ಗಳಿಸಿ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊದಲ ಬಾರಿಗೆ ಆಯೋಜಿಸಿದ್ದ 9 ವರ್ಷದೊಳಗಿನ ವನಿತೆಯರ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿ ಚಾಂಪಿಯನ್ ಪಟ್ಟವನ್ನು ಭಾರತದ ತಂಡ ಅಲಂಕರಿಸಿತ್ತು.
ವಿಜೇತ ತಂಡಕ್ಕೆ ಅಭಿನಂದನೆ - ಜಯ್ ಶಾ ಟ್ವೀಟ್:ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಫೆಬ್ರವರಿ 1ರಂದು ಸಂಜೆ 6.30ಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂಡರ್ 19 ಮಹಿಳಾ ವಿಶ್ವಕಪ್ ವಿಜಯಶಾಲಿ ಭಾರತ ತಂಡವನ್ನು ಭಾರತ ರತ್ನ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಪದಾಧಿಕಾರಿಗಳು ಅಭಿನಂದಿಸಲಿದ್ದಾರೆ ಎಂಬ ವಿಷಯವನ್ನು ನಾನು ತುಂಬಾ ಸಂತೋಷದಿಂದ ಹಂಚಿಕೊಳ್ಳುತ್ತೇನೆ. ಯುವ ಕ್ರಿಕೆಟಿಗರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರ ಸಾಧನೆಯನ್ನು ಗೌರವಿಸುತ್ತೇವೆ ಎಂದು ಜಯ್ ಶಾ ತಿಳಿಸಿದ್ದಾರೆ.