ಕರ್ನಾಟಕ

karnataka

ETV Bharat / sports

Shreyas Iyer: ಮತ್ತೆ ಗಾಯಕ್ಕೆ ತುತ್ತಾದ ಶ್ರೇಯಸ್​ ಅಯ್ಯರ್​.. ವಿಶ್ವಕಪ್​ ತಂಡದಲ್ಲಿ ಆಗುವುದೇ ಬದಲಾವಣೆ?

Asia Cup 2023: ಶ್ರೇಯಸ್​ ಅಯ್ಯರ್​ ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆಯೇ ಬೆನ್ನಿನ ನೋವಿನಿಂದ ಬಳಲುತ್ತಿದ್ದರು. ಇಂದಿನ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗಿದ್ದಾರೆ.

Shreyas Iyer
Shreyas Iyer

By ETV Bharat Karnataka Team

Published : Sep 12, 2023, 4:08 PM IST

ಕೊಲಂಬೊ (ಶ್ರೀಲಂಕಾ):ಏಷ್ಯಾಕಪ್​ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಮತ್ತೆ ಗಾಯದ ಬರೆ ಬಿದ್ದಿದೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಂತರ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಸಂಪೂರ್ಣ ಚೇತರಿಕೆ ಕಂಡು ಫಿಟ್​ನೆಸ್​ ಪರೀಕ್ಷೆ ಪಾಸ್​ ಆಗಿ ಏಷ್ಯಾಕಪ್​ ತಂಡಕ್ಕೆ ಸೇರಿದ್ದ ಶ್ರೇಯಸ್​ ಅಯ್ಯರ್​ ಮತ್ತೆ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಭಾನುವಾರ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದ ಟಾಸ್​ ವೇಳೆ ನಾಯಕ ರೋಹಿತ್​ ಶರ್ಮಾ ಅಯ್ಯರ್​ ಬೆನ್ನು ನೋವಿನ ಕಾರಣಕ್ಕೆ ತಂಡದಿಂದ ಹೊರಗುಳಿಯುತ್ತಿದ್ದು, ಕೆಎಲ್​ ರಾಹುಲ್​ ಆಡಲಿದ್ದಾರೆ ಎಂದು ಹೇಳಿದ್ದರು.

ಇಂದು ಶ್ರೀಲಂಕಾದ ವಿರುದ್ಧ ಭಾರತ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ ಎರಡನೇ ಹಣಾಹಣಿಯನ್ನು ಮಾಡುತ್ತಿದ್ದು, ಈ ವೇಳೆ ಅಯ್ಯರ್​ ತಂಡದೊಂದಿಗೆ ಮೈದಾನಕ್ಕೆ ಪ್ರಯಾಣಿಸುತ್ತಿಲ್ಲ ಎಂದಿ ಬಿಸಿಸಿಐ ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ತಿಳಿಸಿದೆ. ಪೋಸ್ಟ್​ನಲ್ಲಿ "ಶ್ರೇಯಸ್ ಅಯ್ಯರ್ ಅವರು ಉತ್ತಮವಾಗಿದ್ದಾರೆ. ಆದರೆ ಬೆನ್ನು ಸೆಳೆತದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿಗೆ ಬಿಸಿಸಿಐ ವೈದ್ಯಕೀಯ ತಂಡವು ವಿಶ್ರಾಂತಿಗೆ ಸಲಹೆ ನೀಡಿದೆ. ಅಯ್ಯರ್​ ಅವರು ತಂಡದೊಂದಿಗೆ ಇಂದು ಶ್ರೀಲಂಕಾ ವಿರುದ್ಧ ಭಾರತದ ಸೂಪರ್ 4 ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಪ್ರಯಾಣಿಸಿಲ್ಲ " ಎಂದು ಬರೆದುಕೊಂಡಿದೆ.

ಮತ್ತೆ ಮಧ್ಯಮ ಕ್ರಮಾಂಕಕ್ಕೆ ಅಘಾತ: ಕಳೆದ ಒಂದು ವರ್ಷದಿಂದ ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಕೊರತೆ ಕಾಡುತ್ತಿತ್ತು. ರಿಷಬ್​ ಪಂತ್​, ಶ್ರೇಯಸ್​ ಅಯ್ಯರ್​ ಮತ್ತು ಕೆಎಲ್ ​ರಾಹುಲ್​ ಒಮ್ಮೆಗೆ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಮಧ್ಯಮ ಕ್ರಮಾಂಕ ಸಮಸ್ಯೆಗೆ ಒಳಗಾಗಯಿತು. ಈ ಸ್ಥಾನಕ್ಕೆ ಹಲವಾರು ಪ್ರಯೋಗಗಳು ನಡೆದರೂ ಪ್ರಯೋಜನ ಆಗಲಿಲ್ಲ. ವಿಶ್ವಕಪ್​ಗೂ ಮುನ್ನ ರಾಹುಲ್​ ಮತ್ತು ಅಯ್ಯರ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಇದು ಭರವಸೆ ಮೂಡಿಸಿತ್ತು. ಆದರೆ ಈಗ ಮತ್ತೆ ಅಯ್ಯರ್​ ಗಾಯಕ್ಕೆ ತುತ್ತಾಗಿರುವುದು ವಿಶ್ವಕಪ್​ ಹಿನ್ನೆಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಯ್ಯರ್​ ಅವರ ನೋವು ಉಲ್ಬಣವಾದಲ್ಲಿ ಮಧ್ಯಮ ಕ್ರಮಾಂಕಕ್ಕೆ ವಿಕೆಟ್​ ಕೀಪರ್​, ಬ್ಯಾಟರ್​ ಸಂಜು ಸ್ಯಾಮ್ಸನ್​ ಆಯ್ಕೆ ಆಗುವ ಸಾಧ್ಯತೆ ಇದೆ. ಏಷ್ಯಾಕಪ್​ನ ತಂಡದಲ್ಲಿ ಸಂಜು ಮೀಸಲು ಆಟಗಾರರಾಗಿ ಪ್ರಯಾಣಿಸಿದ್ದಾರೆ. ಅಯ್ಯರ್​ಗೆ ನೋವು ಹೆಚ್ಚಾದಲ್ಲಿ ವಿಶ್ವಕಪ್​ ತಂಡದಲ್ಲೂ ಬದಲಾವಣೆ ಸಾಧ್ಯತೆಗಳಿವೆ.

ಏಷ್ಯಕಪ್​ ತಂಡದಲ್ಲಿ ಸ್ಥಾನ ಪಡೆದ ಅಯ್ಯರ್​ಗೆ ಕೇವಲ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿತ್ತು. ಪಾಕಿಸ್ತಾನದ ವಿರುದ್ಧ ಸಿಕ್ಕ ಅವಕಾಶವನ್ನು ಅಯ್ಯರ್​ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲಿಲ್ಲ. ನೇಪಾಳದ ವಿರುದ್ಧದ ಪಂದ್ಯದಲ್ಲಿ ಆರಂಭಿಕರೇ ಪಂದ್ಯವನ್ನು ಮುಗಿಸಿದ್ದರಿಂದ ಕೆಳಕ್ರಮಾಂಕಕ್ಕೆ ಬ್ಯಾಟಿಂಗ್​ ಸಿಕ್ಕಿರಲಿಲ್ಲ. ಸೂಪರ್​ ಫೋರ್ ಹಂತದ ಪಾಕಿಸ್ತಾನದ ವಿರುದ್ಧದ​ ಪಂದ್ಯಕ್ಕೆ ಗಾಯದಿಂದ ಹೊರಗುಳಿದುರ. ಇನ್ನು ವಿಶ್ವಕಪ್​ಗೂ ಮುನ್ ಇರುವ ಆಸ್ಟ್ರೇಲಿಯಾ ಸರಣಿಯಲ್ಲಿ ಅಯ್ಯರ್​​ ತಮ್ಮ ಫಿಟ್​ನೆಸ್​ ಸಾಬೀತು ಮಾಡಬೇಕಿದೆ. (ಪಿಟಿಐ)

ಇದನ್ನೂ ಓದಿ:IND vs SL: ಟಾಸ್​ ಗೆದ್ದ ರೋಹಿತ್​ ಬ್ಯಾಟಿಂಗ್ ಆಯ್ಕೆ.. ಅಖಾಡದಲ್ಲಿ​ ತ್ರಿವಳಿ ಸ್ಪಿನ್ನರ್​ಗಳು

ABOUT THE AUTHOR

...view details