ನವದೆಹಲಿ: ಮೇ 19ರಂದು BCCI ಭಾರತ ಮಹಿಳಾ ಕ್ರಿಕೆಟಿಗರ ವಾರ್ಷಿಕ ಒಪ್ಪಂದ ಪಟ್ಟಿ ಬಿಡುಗಡೆ ಮಾಡಿತ್ತು. ಯುವ ಆಟಗಾರ್ತಿಯರಾದ ರಿಚ ಘೋಷ್ ಮತ್ತು ಶೆಫಾಲಿ ವರ್ಮಾ ಸಿ ಗ್ರೇಡ್ನಿಂದ ಬಿ ಗ್ರೇಡ್ಗೆ ತೇರ್ಗಡೆಯಾಗಿದ್ದರು. ಆದರೆ, ಏಕ್ತ ಬಿಷ್ತ್, ವೇದಾ ಕೃಷ್ಣಮೂರ್ತಿ, ಅನುಜಾ ಪಾಟೀಲ್ ಮತ್ತು ಡಿ. ಹೇಮಲತಾ ಅವರ ಗುತ್ತಿಗೆಯಿಂದ ಹೊರ ಬಿದ್ದಿದ್ದರು.
ಆದರೆ, ಇಂಗ್ಲೆಂಡ್ ದಿನಪತ್ರಿಕೆಯೊಂದು BCCI ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಆ ನಾಲ್ಕು ಆಟಗಾರ್ತಿಯರಿಗೆ 8 ತಿಂಗಳ ವೇತನ ನೀಡಿಲ್ಲ ಎಂದು ವರದಿ ಮಾಡಿತ್ತು. ಆದರೆ, ಬಿಸಿಸಿಐ ಈ ವರದಿಯನ್ನು ಅಲ್ಲಗಳೆದಿದ್ದು, ಒಪ್ಪಂದದಲ್ಲಿರುವ ಎಲ್ಲ ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
" ಇದು ಸಂಪೂರ್ಣವಾಗಿ ಸುಳ್ಳು. ಪ್ರತಿಯೊಬ್ಬ ಕ್ರಿಕೆಟರ್ಗೂ ಬಿಸಿಸಿಐನೊಂದಿಗಿನ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ. ಒಪ್ಪಂದದ ಅವಧಿಗೆ 2020ಕ್ಕೆ ಕೊನೆಗೊಂಡಿದೆ. ಆ ಒಪ್ಪಂದದ ನಂತರದ 8 ತಿಂಗಳ ವೇತನವನ್ನು ನೀಡಲಾಗುವುದಿಲ್ಲ. ಏಕೆಂದರೆ ವಾರ್ಷಿಕ ಒಪ್ಪಂದದಲ್ಲಿ ಆ ನಾಲ್ವರು ಇರುವುದಿಲ್ಲ. ವರದಿ ಸಂಪೂರ್ಣ ತಪ್ಪಾಗಿದೆ" ಎಂದು ಬಿಸಿಸಿಐ ಅಧಿಕಾರಿ ಎಎನ್ಐಗೆ ಮಾಹಿತಿ ನೀಡಿದ್ದಾರೆ.