ಕರ್ನಾಟಕ

karnataka

ETV Bharat / sports

ಟಿ20ಗೆ ಸೂರ್ಯ, ಏಕದಿನದಲ್ಲಿ ಅಯ್ಯರ್‌, ಟೆಸ್ಟ್‌ನಲ್ಲಿ ಪಂತ್‌: ಕಳೆದ ವರ್ಷದ ಬೆಸ್ಟ್‌ ಕ್ರಿಕೆಟರ್ಸ್!

ಕಳೆದ ವರ್ಷ ಭಾರತ ಕ್ರಿಕೆಟ್​ ಹಲವು ಏಳುಬೀಳುಗಳನ್ನು ಕಂಡಿತು. ಇದರ ಮಧ್ಯೆ ಮೂರು ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

best-india-players
ಕಳೆದ ವರ್ಷದ ಬೆಸ್ಟ್‌ ಕ್ರಿಕೆಟರ್ಸ್

By

Published : Jan 1, 2023, 11:10 AM IST

ನವದೆಹಲಿ:ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) 2022 ರಲ್ಲಿ ಟೆಸ್ಟ್​, ಟಿ20, ಏಕದಿನ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಟೆಸ್ಟ್​ನಲ್ಲಿ ರಿಷಬ್​ ಪಂತ್​ ಮತ್ತು ಜಸ್ಪ್ರೀತ್​ ಬೂಮ್ರಾ, ಏಕದಿನದಲ್ಲಿ ಶ್ರೇಯಸ್​ ಅಯ್ಯರ್, ಮೊಹಮದ್​ ಸಿರಾಜ್​, ಟಿ20ಯಲ್ಲಿ ಸೂರ್ಯಕುಮಾರ್​ ಯಾದವ್​ ಮತ್ತು ಭುವನೇಶ್ವರ್​ ಕುಮಾರ್​​ ಅತ್ಯುತ್ತಮ ಪ್ರದರ್ಶಕರಾಗಿ ಹೊರಹೊಮ್ಮಿದ್ದಾರೆ.

ಟೆಸ್ಟ್​ ಬೆಸ್ಟ್​​ ಪರ್ಫಾಮರ್ಸ್​:ಅತ್ಯುತ್ತಮ ಆಟಗಾರರು ಮತ್ತು ಅವರ ಸಾಧನೆಯ ಅಂಕಿಅಂಶಗಳನ್ನು ಟ್ವೀಟ್​ ಮಾಡಿರುವ ಬಿಸಿಸಿಐ, ಟೆಸ್ಟ್​ ಮಾದರಿಯಲ್ಲಿ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್​ ಪಂತ್​ ಉತ್ತಮ ಬ್ಯಾಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಪಂತ್​ 2022 ರಲ್ಲಿ 7 ಪಂದ್ಯಗಳಲ್ಲಿ 680 ರನ್​ ಬಾರಿಸಿ, ಅತ್ಯಧಿಕ ಭಾರತದ ಸ್ಕೋರರ್​ ಆಗಿದ್ದಾರೆ. 61.81 ರ ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದು, 146 ಗರಿಷ್ಠ ರನ್​ನೊಂದಿಗೆ 4 ಅರ್ಧಶತಕ, 2 ಶತಕ ಬಾರಿಸಿದ್ದಾರೆ.

ಬೌಲಿಂಗ್​ನಲ್ಲಿ ಗಾಯಕ್ಕೀಡಾಗಿ ಹಲವು ದಿನಗಳಿಂದ ಕ್ರಿಕೆಟ್​ನಿಂದ ದೂರವಿರುವ ಜಸ್ಪ್ರೀತ್​ ಬೂಮ್ರಾ 5 ಪಂದ್ಯಗಳಲ್ಲಿ 22 ವಿಕೆಟ್​ ಕಿತ್ತಿದ್ದಾರೆ. 47 ರನ್​ಗೆ 8 ವಿಕೆಟ್​ ಪಡೆದಿದ್ದು ಗರಿಷ್ಠ ಪ್ರದರ್ಶನವಾಗಿದ್ದರೆ, 2 ಬಾರಿ ಐದು ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ.

ಏಕದಿನದ ಉತ್ತಮ ಆಟಗಾರರು:50 ಓವರ್​ಗಳ ಮಾದರಿಯಲ್ಲಿ ಸಿಕ್ಕ ಅವಕಾಶವನ್ನು ಬಾಚಿಕೊಂಡಿರುವ ಶ್ರೇಯಸ್​ ಅಯ್ಯರ್​ ಉತ್ತಮ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ. ವರ್ಷದಲ್ಲಿ ಆಡಿದ 17 ಪಂದ್ಯಗಳಲ್ಲಿ 724 ರನ್​ ಗಳಿಸಿದ್ದಾರೆ. 55.69 ರ ಸರಾಸರಿಯಲ್ಲಿ 113 ಗರಿಷ್ಠ ರನ್​ ಜೊತೆಗೆ 6 ಅರ್ಧಶತಕ, 1 ಶತಕ ಬಾರಿಸಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಮೊಹಮದ್​ ಸಿರಾಜ್​ 15 ಪಂದ್ಯದಲ್ಲಿ 24 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಟಿ20ಯಲ್ಲಿ ಬೆಳಗಿದ ಸೂರ್ಯ:ಪ್ರಸ್ತುತ ಭಾರತ ತಂಡದ ಡ್ಯಾಶಿಂಗ್​ ಬ್ಯಾಟರ್ ಆಗಿರುವ ಸೂರ್ಯಕುಮಾರ್​ ಯಾದವ್​ ಚುಟುಕು ಮಾದರಿಯಲ್ಲಿ ಉತ್ತಮ ಲಯದಲ್ಲಿದ್ದಾರೆ. 31 ಟಿ20 ಪಂದ್ಯದಲ್ಲಿ 1164 ರನ್​ ಬಾರಿಸಿದ್ದಾರೆ. 117 ಗರಿಷ್ಠ ಸ್ಕೋರ್​, 9 ಅರ್ಧಶತಕ, 2 ಶತಕ ಸಿಡಿಸಿದ್ದಾರೆ. ಅಲ್ಲದೇ ವರ್ಷದಲ್ಲಿ 1 ಸಾವಿರಕ್ಕೂ ಅಧಿಕ ರನ್​ ಬಾರಿಸಿದ ಆಟಗಾರರಾಗಿದ್ದಾರೆ. ಬೌಲಿಂಗ್​ನಲ್ಲಿ ಹಿರಿಯ ವೇಗಿ ಭುವನೇಶ್ವರ್​ ಕುಮಾರ್​ ಉತ್ತಮ ಪ್ರದರ್ಶನ ನೀಡಿದ್ದು, 32 ಪಂದ್ಯಗಳಲ್ಲಿ 37 ವಿಕೆಟ್​ ಪಡೆದಿದ್ದಾರೆ. 4 ರನ್​ಗೆ 5 ವಿಕೆಟ್​ ಕಿತ್ತಿದ್ದು ಗರಿಷ್ಠ ಆಟವಾಗಿದೆ.

ಶ್ರೀಲಂಕಾ ವಿರುದ್ಧ ಜನವರಿ 3 ರಿಂದ ಟಿ20 ಸರಣಿ ಆಡುವ ಮೂಲಕ ತವರಿನ ಚರಣವನ್ನು ಭಾರತ ತಂಡ ಆರಂಭಿಸಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ಭಾರತ ಪ್ರವಾಸ ಕೈಗೊಳ್ಳಲಿವೆ.

ಇದನ್ನೂ ಓದಿ:ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್​ ಪಂತ್​ ಔಟ್​?: ರೇಸ್​ನಲ್ಲಿ ಉಪೇಂದ್ರ, ಭರತ್​

ABOUT THE AUTHOR

...view details