ಕರ್ನಾಟಕ

karnataka

ETV Bharat / sports

ಒಲಿಂಪಿಕ್​​ ಬೌಂಡ್​ ಅಥ್ಲೀಟ್​ಗಳಿಗೆ ಬಿಸಿಸಿಐನಿಂದ 10 ಕೋಟಿ.ರೂ ನೆರವು - ಬಿಸಿಸಿಐ 10 ಕೋಟಿ ನೆರವು

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ನೇತೃತ್ವದಲ್ಲಿ ನಡೆದ ಅಪೆಕ್ಸ್​ ಕೌನ್ಸಿಲ್ ಸಭೆಯಲ್ಲಿ ಕ್ರೀಡಾಪಟುಗಳಿಗೆ 10 ಕೋಟಿ ರೂ. ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಒಲಿಂಪಿಕ್ಸ್​ ಬೌಂಡ್​ ಅಥ್ಲೀಟ್​ಗಳಿಗೆ ಬಿಸಿಸಿಐನಿಂದ 10 ಕೋಟಿ.ರೂ ನೆರವು
ಒಲಿಂಪಿಕ್ಸ್​ ಬೌಂಡ್​ ಅಥ್ಲೀಟ್​ಗಳಿಗೆ ಬಿಸಿಸಿಐನಿಂದ 10 ಕೋಟಿ.ರೂ ನೆರವು

By

Published : Jun 20, 2021, 8:42 PM IST

ನವದೆಹಲಿ: ಭಾರತೀಯ ಒಲಿಂಪಿಕ್​ ಬೌಂಡ್​ ಕ್ರೀಡಾಪಟುಗಳ ತಯಾರಿಗಾಗಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) 10 ಕೋಟಿ ರೂಪಾ ನೆರವು ನೀಡುವುದಾಗಿ ಇಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ನೇತೃತ್ವದಲ್ಲಿ ನಡೆದ ಅಪೆಕ್ಸ್​ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಹೌದು, ಒಲಿಂಪಿಕ್ ಸ್ಪರ್ಧೆಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ 10 ಕೋಟಿ ರೂ ಮೊತ್ತವನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಬಿಡುಗಡೆ ಮಾಡಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಈ ಹತ್ತು ಕೋಟಿ ರೂ.ಗಳನ್ನ ಅಥ್ಲೀಟ್​ಗಳ ತಯಾರಿಗಾಗಿ ಮತ್ತು ಟೋಕಿಯೋ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿರುವ ನಮ್ಮ ಗಣ್ಯ ಕ್ರೀಡಾಪಟುಗಳ ಮಾರ್ಕೆಟಿಂಗ್ ಮತ್ತು ಪ್ರಚಾರ ಚಟುವಟಿಕೆಗಳಿಗೆ ವಿನಿಯೋಗಿಸಲಾಗುವುದು. ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ನೊಂದಿಗೆ ಚರ್ಚೆ ನಡೆಸಿದ ನಂತರ ಪಾವತಿಯ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಇದನ್ನು ಓದಿ:Fathers Day: ಈ ಹೆಣ್ಮಕ್ಕಳ ಸಾಧನೆಯ ಹಿಂದಿದ್ದಾರೆ ಅಪ್ಪ ಎಂಬ ಮಹಾನ್ ಚೇತನ..!

ABOUT THE AUTHOR

...view details