ಕೋಲ್ಕತ್ತಾ(ಪಶ್ಚಿಮ ಬಂಗಾಳ):ಏಷ್ಯಾ ಕಪ್ ಟಿ20 ಹಣಾಹಣಿಗೆ ಅರಬ್ ನಾಡಿನಲ್ಲಿ ಈಗಾಗಲೇ ವೇದಿಕೆ ಸಜ್ಜುಗೊಂಡಿದ್ದು, ಎಲ್ಲರ ಕಣ್ಣು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಮೇಲಿದೆ. ಈ ಪಂದ್ಯದ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸಹ ಮಾತನಾಡಿದ್ದಾರೆ.
ಕೋಲ್ಕತ್ತಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 1992ರಿಂದ 2022ರ ನಡುವೆ ಏಷ್ಯಾ ಕಪ್ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಒಂದು ಸಲ ಮಾತ್ರ ಸೋತಿದೆ. ಖಂಡಿತವಾಗಿ ಒತ್ತಡ ಪಾಕಿಸ್ತಾನದ ಮೇಲಿದೆ ಎಂದರು. ತಂಡದಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಅನುಭವಿ ಆಟಗಾರರಾಗಿದ್ದು, ಒತ್ತಡವನ್ನು ಹೇಗೆ ಎದುರಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದರು.
ಎಲ್ಲ ತಂಡಗಳ ರೀತಿ ಭಾರತ-ಪಾಕಿಸ್ತಾನ ನಡುವೆ ಇದೊಂದು ಪಂದ್ಯವಾಗಿದೆ. ನಿಯಮಿತವಾಗಿ ಕ್ರಿಕೆಟ್ ಆಡುವವರು ಅಥವಾ ಈ ಹಿಂದೆ ನಾನು ಆಡಿದಾಗಲೂ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ವಿಶೇಷ ಪಂದ್ಯವೆಂದು ತೆಗೆದುಕೊಳ್ಳಲಿಲ್ಲ. ಮುಖ್ಯವಾಗಿ ನಾಕೌಟ್ ಪಂದ್ಯಗಳಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ಆದರೆ, ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ರಂತಹ ಅನುಭವಿ ಆಟಗಾರರಿದ್ದಾರೆ. ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ತಿಳಿದಿದೆ. ಇದು ಅವರಿಗೆ ದೊಡ್ಡ ವಿಷಯವಲ್ಲ ಎಂದರು.