ಮುಂಬೈ: ಕೋವಿಡ್ 19 ಕಾರಣ ಅರ್ಧಕ್ಕೆ ರದ್ದಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದುವರಿದ ಭಾಗವನ್ನು ನಡೆಸಲು ಇಂಗ್ಲೆಂಡ್ ಬಿಸಿಸಿಐ ಮುಂದಿರುವ ಮೊದಲ ಆಯ್ಕೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ನೆಲದಲ್ಲೇ ಆಡಲಿದೆ. ವಿಶ್ವಕಪ್ ಅಕ್ಟೋಬರ್ ಮಧ್ಯಂತರದಲ್ಲಿ ಆರಂಭವಾಗಲಿರುವುದರಿಂದ ಅರ್ಧಕ್ಕೆ ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್ ಅನ್ನು ಇಂಗ್ಲೆಂಡ್ನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ.
ಅದಕ್ಕಾಗಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿನ ಬೇಗ ಮುಗಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಜೊತೆಗೆ ಮಾತುಕತೆ ನಡೆಸುತ್ತಿದೆ. ಕೆಲವೊಂದು ಪಂದ್ಯ 9 ದಿನಗಳ ಅಂತರವಿದೆ. ಹಾಗೂ ಜುಲೈ ತಿಂಗಳಲ್ಲಿ ಭಾರತ ತಂಡ ಯಾವುದೇ ಕ್ರಿಕೆಟ್ ಇಲ್ಲದೇ ಕೇವಲ ಇಂಟ್ರಾಸ್ಕ್ವಾಡ್ ಪಂದ್ಯಗಳನ್ನಾಡಲಿದೆ. ಆದ್ದರಿಂದ ಟೆಸ್ಟ್ ಸರಣಿಯನ್ನು ಬೇಗ ಮುಗಿಸಲು ಕೇಳಿಕೊಳ್ಳಬಹುದು ಎಂದು ತಿಳಿದು ಬಂದಿದೆ.
ಒಂದು ವೇಳೆ ಇಸಿಬಿ ಇದಕ್ಕೆ ಒಪ್ಪಿಗೆ ಸೂಚಿಸಿದರೆ, ಐಪಿಎಲ್ ಪೂರ್ಣಗೊಳಿಸಲು ಅನುಕೂಲವಾಗಲಿದೆ. ಜೊತೆಗೆ ಕೌಂಟಿ ಕ್ಲಬ್ಗಳು ಆದಾಯ ಕಾಣಬಹುದು ಎನ್ನಲಾಗುತ್ತಿದೆ. ಆದರೆ ಎರಡೂ ಕ್ರಿಕೆಟ್ ಮಂಡಳಿಗಳು ಈ ವಿಚಾರದ ಬಗ್ಗೆ ಇನ್ನೂ ಬಹಿರಂಗವಾಗಿ ಯಾವುದೇ ಮಾಹಿತಿ ನೀಡಿಲ್ಲ. ಮೇ 29ರಂದು ಬಿಸಿಸಿಐ ಸಭೆ ನಡೆಯಲಿದ್ದು, ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳದಿರಲು ಕಾರಣ ತಿಳಿಸಿದ ಬೌಚರ್