ಪ್ರಸ್ತುತ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಹೀಗಾಗಿ 2022ರ 15ನೇ ಐಪಿಎಲ್ ಕ್ರಿಕೆಟ್ ಟೂರ್ನಿಗೆ ಓಮಿಕ್ರಾನ್ ಭೀತಿ ಎದುರಾಗಿದ್ದು, ಬಿಸಿಸಿಐ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ. ಹೊಸ ಸೀಸನ್ ಆರಂಭವಾಗುವ ವೇಳೆಗೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಏನು ಮಾಡಬೇಕೆಂಬುದರ ಬಗ್ಗೆ ಪ್ಲಾನ್-ಬಿ ಕೂಡ ಸಿದ್ಧವಾಗುತ್ತಿದೆಯಂತೆ.
2022ರ ಐಪಿಎಲ್ಗೆ ಒಮಿಕ್ರಾನ್ ಅಡ್ಡಿಯಾದರೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂಬುದರ ಬಗ್ಗೆ ಈಗಾಗಲೇ ಬಿಸಿಸಿಐ ವಲಯದಲ್ಲಿ ಚಿಂತನೆ ಆರಂಭಗೊಂಡಿದೆ. ಈ ಬಗ್ಗೆ ಮುಂದಿನ ತಿಂಗಳು ತಂಡದ ಮಾಲೀಕರ ಜೊತೆಗಿನ ಸಭೆಯಲ್ಲಿ ಚರ್ಚೆ ನಡೆಯಲಿದ ಎಂಬ ಮಾಹಿತಿ ಇದೆ.
ಪ್ಲಾನ್-ಬಿ ಏನು?
ಕಳೆದ ಎರಡು ಐಪಿಎಲ್ ಸೀಸನ್‌ಗಳು ಯುಎಇಯಲ್ಲಿ ನಡೆದಿವೆ (2021ರ ಮೊದಲಾರ್ಧ ಹೊರತುಪಡಿಸಿ). 2021ರ ಆವೃತ್ತಿಯನ್ನು ಕೆಲ ಪ್ರೇಕ್ಷಕರ ಸಮ್ಮುಖದಲ್ಲಿ ನಡೆಸಲಾಗಿತ್ತು. ಮುಂದಿನ 2022ರ ಆವೃತ್ತಿಯನ್ನು ತವರಿನಲ್ಲಿಯೇ ನಡೆಸಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಶಿಸುತ್ತಿದೆ.