ಕರ್ನಾಟಕ

karnataka

ETV Bharat / sports

ಬಿಸಿಸಿಐನಿಂದ ಯಾವುದೇ ಕೋರಿಕೆ ಬಂದಿಲ್ಲ, ನಿಗದಿಯಂತೆ ಟೆಸ್ಟ್​ ಸರಣಿ: ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್​ - ಟೆಸ್ಟ್​ ಕ್ರಿಕೆಟ್​ ಸರಣಿ

ಐಪಿಎಲ್​ ನಡೆಸುವ ಉದ್ದೇಶದಿಂದ ಟೆಸ್ಟ್​ ಸರಣಿ ಒಂದು ವಾರ ಮುಂಚಿತವಾಗಿ ನಡೆಸುವಂತೆ ಬಿಸಿಸಿಐ ನಮ್ಮ ಬಳಿ ಮನವಿ ಮಾಡಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಹೇಳಿಕೊಂಡಿದೆ.

ECB
ECB

By

Published : May 21, 2021, 4:44 PM IST

ಹೈದರಾಬಾದ್​: ಐದು ಟೆಸ್ಟ್​ ಪಂದ್ಯಗಳ ಟೆಸ್ಟ್​ ಸರಣಿ ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್​​ ಕ್ರಿಕೆಟ್​​ ಸಮಿತಿ ಬಳಿ ಬಿಸಿಸಿಐ ಮನವಿ ಮಾಡಿಕೊಂಡಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಇದಕ್ಕೆ ಸ್ಪಷ್ಟೀಕರಣ ನೀಡಿರುವ ಇಸಿಬಿ, ನಮಗೆ ಆ ರೀತಿಯ ಯಾವುದೇ ಕೋರಿಕೆ ಬಂದಿಲ್ಲ ಎಂದು ತಿಳಿಸಿದೆ.

ಅರ್ಧಕ್ಕೆ ರದ್ದುಗೊಂಡಿರುವ ಇಂಡಿಯನ್​ ಪ್ರೀಮಿಯರ್ ಲೀಗ್​​ ನಡೆಸಲು ಸಹಾಯವಾಗುವಂತೆ ಭಾರತೀಯ ಕ್ರಿಕೆಟ್ ಮಂಡಳಿ ಈ ಕೋರಿಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ, ಇಂಗ್ಲೆಂಡ್​ ಮತ್ತು ವೇಲ್ಸ್​​​ ಕ್ರಿಕೆಟ್ ಮಂಡಳಿ(ಇಸಿಬಿ) ಈ ಮಾಹಿತಿ ತಳ್ಳಿ ಹಾಕಿದೆ.

ಇದನ್ನೂ ಓದಿ: ಟೆಸ್ಟ್ ಸರಣಿಯನ್ನು ಒಂದು ವಾರ ಮುಂಚಿತವಾಗಿ ನಡೆಸಿ: ಇಂಗ್ಲೆಂಡ್‌ ಕ್ರಿಕೆಟ್‌ಗೆ ಬಿಸಿಸಿಐ ಮನವಿ

ಐಪಿಎಲ್​ನಲ್ಲಿ ಇದೀಗ ಉಳಿದುಕೊಂಡಿರುವ 31 ಪಂದ್ಯ ಸೆಪ್ಟೆಂಬರ್ ತಿಂಗಳಲ್ಲಿ ನಡೆಸುವ ಯೋಜನೆ ಹಾಕಿಕೊಂಡಿರುವ ಬಿಸಿಸಿಐ, ಭಾರತ-ಇಂಗ್ಲೆಂಡ್​​ ನಡುವಿನ ಐದು ಟೆಸ್ಟ್​​ ಪಂದ್ಯಗಳ ಸರಣಿ ಒಂದು ವಾರ ಮುಂಚಿತವಾಗಿ ನಡೆಸುವಂತೆ ಹೇಳಿಕೊಂಡಿತ್ತು. ಈ ಟೂರ್ನಿ ಆಗಸ್ಟ್​ 4ಕ್ಕೆ ಆರಂಭಗೊಂಡು ಸೆಪ್ಟೆಂಬರ್​​ 14ಕ್ಕೆ ಕೊನೆಗೊಳ್ಳಬೇಕಾಗಿತ್ತು. ಒಂದು ವಾರ ಮುಂಚಿತವಾಗಿ ಆರಂಭಗೊಂಡರೆ ಐಪಿಎಲ್​ ನಡೆಸಲು ಸಹಾಯವಾಗುತ್ತಿತ್ತು ಎಂಬುದು ಬಿಸಿಸಿಐ ಇರಾದೆಯಾಗಿದೆ.

ಟೀಂ ಇಂಡಿಯಾ

ಇಸಿಬಿ ಹೇಳಿದ್ದೇನು?

ಆಗಸ್ಟ್​​-ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಐದು ಟೆಸ್ಟ್​ ಪಂದ್ಯಗಳ ಸರಣಿ ದಿನಾಂಕ ಮುಂದೂಡಿಕೆ ಮಾಡಲು ನಮಗೆ ಯಾವುದೇ ಅಧಿಕೃತ ಮನವಿ ಬಂದಿಲ್ಲ. ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವರದಿ ಸತ್ಯಕ್ಕೆ ದೂರು ಎಂದಿದೆ.

ನಾವು ನಿಯಮಿತವಾಗಿ ಭಾರತೀಯ ಕ್ರಿಕೆಟ್ ಮಂಡಳಿ ಜತೆ ಸಂಪರ್ಕದಲ್ಲಿದ್ದು, ಇಲ್ಲಿಯವರೆಗೆ ಆ ರೀತಿಯ ಯಾವುದೇ ಮನವಿ ನಮಗೆ ಬಂದಿಲ್ಲ. ಈಗಾಗಲೇ ನಿಗದಿಗೊಂಡಿರುವ ರೀತಿಯಲ್ಲಿ ಟೆಸ್ಟ್​ ಸರಣಿ ಮುಂದುವರಿಯಲಿವೆ ಎಂದಿದೆ.

ABOUT THE AUTHOR

...view details