ನವದೆಹಲಿ: ಈಗಾಗಲೇ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಮುಂದಿನ ಆವೃತ್ತಿಯಿಂದ 2 ಹೊಸ ತಂಡಗಳ ಸೇರ್ಪಡೆಯಿಂದ ಭಾರಿ ಆದಾಯಗಳಿಸಲಿದೆ. ಕೇವಲ ಐಪಿಎಲ್ ಪ್ರಸಾರ ಹಕ್ಕುಗಳಿಂದಲೇ (ಟಿವಿ ಮತ್ತು ಡಿಜಿಟಲ್) ಮಂಡಳಿಯು ಮುಂದಿನ ಐದು ವರ್ಷಗಳ ಅವಧಿಗೆ (2023 - 2027) 5 ಬಿಲಿಯನ್ ಡಾಲರ್(ಸುಮಾರು 37 ಸಾವಿರ ಕೋಟಿ ರೂ) ಗಳಿಸಬಹುದು ಎಂದು ಅಂದಾಜಿಸಲಾಗಿದೆ.
2018ರಿಂದ 2022ರವರೆಗಿನ 5 ವರ್ಷಗಳ ಐಪಿಎಲ್ ನೇರ ಪ್ರಸಾರ ಹಕ್ಕುಗಳನ್ನು ಸ್ಟಾರ್ ಇಂಡಿಯಾ ಪಡೆದಿದೆ. ಬಿಸಿಸಿಐ ಒಪ್ಪಂದದ ಪ್ರಕಾರ ಈ ಅವಧಿಯಲ್ಲಿ ಸುಮಾರು 16,347.50 ಕೋಟಿ ರೂಪಾಯಿಯಾಗಿದ್ದು, ಮುಂದಿನ 5 ವರ್ಷಗಳ ಸೈಕಲ್ನಲ್ಲಿ ಇದು 5 ಶತಕೋಟಿ ಡಾಲರ್(ಪ್ರಸ್ತುತ ವಿನಿಯಮದ ಪ್ರಕಾರ 37,000 ಕೋಟಿ) ಎಂದು ಅಂದಾಜಿಸಲಾಗುತ್ತಿದೆ.
ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ಬಿಡ್ ಮಾಡಲು ತಾವೂ ಆಸಕ್ತಿ ಹೊಂದಿರುವುದಾಗಿ ಅಮೆರಿಕ ಮೂಲದ ಕಂಪನಿಯೊಂದು ಬಿಸಿಸಿಐಗೆ ಪ್ರಸ್ತಾಪನ್ನಿಟ್ಟಿದೆ. 2022 ರಿಂದ ಲೀಗ್ನಲ್ಲಿ 10 ತಂಡಗಳು ಆಡುವುದರಿಂದ ಪಂದ್ಯಗಳ 74ಕ್ಕೆ ಏರಿಕೆಯಾಗಲಿವೆ ಎಂದು ಬಿಸಿಸಿಐ ಅನಾಮದೇಯ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.