ನವದೆಹಲಿ:ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ನಿನ್ನೆ ದಿಢೀರ್ ರಾಜೀನಾಮೆ ಘೋಷಿಸಿ ವಿರಾಟ್ ಕೊಹ್ಲಿ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊಹ್ಲಿ ಅವರ ಈ ನಿರ್ಧಾರ ಅವರ ವೈಯಕ್ತಿಕವಾಗಿದೆ ಎಂದು ಹೇಳಿದ್ದಾರೆ.
ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸೌರವ್, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಎಲ್ಲಾ ಮಾದರಿಗಳಲ್ಲಿ ವೇಗವಾಗಿ ಬಹು ಎತ್ತರಕ್ಕೆ ದಾಪುಗಾಲು ಇಟ್ಟಿದೆ. ಟೆಸ್ಟ್ ತಂಡಕ್ಕೆ ರಾಜೀನಾಮೆ ಘೋಷಣೆ ಮಾಡಿರುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ. ಕೊಹ್ಲಿ ಅವರ ಈ ನಿರ್ಧಾರವನ್ನು ಬಿಸಿಸಿಐ ಅಗಾಧವಾಗಿ ಗೌರವಿಸುತ್ತದೆ ಎಂದಿದ್ದಾರೆ.