ನವದೆಹಲಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟಿಸಲು ಕೆಲವೇ ದಿನಗಳು ಬಾಕಿಯುಳಿದಿದ್ದು, ಅನುಭವಿಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ A ವರ್ಗದಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.
ಆದರೆ ಭಾರತ ತಂಡದ ಭವಿಷ್ಯದ ನಾಯಕ ಸ್ಥಾನದ ಸ್ಪರ್ಧಿಗಳಾದ ಕನ್ನಡಿಗ ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ರನ್ನು ಬಿಸಿಸಿಐ A+ ವರ್ಗಕ್ಕೆ ಬಡ್ತಿ ನೀಡುವ ಸಾಧ್ಯತೆ ಇದೆ. ಈಗಾಗಲೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಈ ಗುಂಪಿನಲ್ಲಿ ಸ್ಥಾನಪಡೆದುಕೊಂಡಿದ್ದಾರೆ
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 4 ಗುಂಪುಗಳಾಗಿ ವಿಂಗಡಿಸಿಲಾಗಿದ್ದು, A+ ವರ್ಗಕ್ಕೆ 7 ಕೋಟಿ ರೂ, A ವರ್ಗಕ್ಕೆ 5 ಕೋಟಿ ರೂ, Bಗೆ 3 ಕೋಟಿ ರೂ, C ವರ್ಗದಲ್ಲಿರುವವರಿಗೆ 1 ಕೋಟಿ ರೂಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಬಿಸಿಸಿಐ ಮೂರು ಪದಾಧಿಕಾರಿಗಳು, ಆಯ್ಕೆ ಸಮಿತಿ ಸಧಸ್ಯರು ಮತ್ತು ರಾಷ್ಟ್ರೀಯ ತಂಡದ ಮುಖ್ಯಕೋಚ್ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ನಿರ್ಧರಿಸಿಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸದ್ಯಕ್ಕೆ, ಕಳೆದ ವರ್ಷದ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ 28 ಹೆಸರುಗಳಲ್ಲಿ ಹೆಚ್ಚೇನು ಬದಲಾವಣೆಗಳಾಗುವುದಿಲ್ಲ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ಜಾರಿಯಲ್ಲಿದ್ದ ಪ್ರಸ್ತುತ ವರ್ಗಗಳ ಸಂಯೋಜನೆ ಬಗ್ಗೆ ಕೆಲವು ಗಂಭೀರ ಚರ್ಚೆಗಳು ನಡೆಯಬಹುದು ಎನ್ನಲಾಗುತ್ತಿದೆ.
ರಾಹುಲ್-ಪಂತ್ಗೆ ಬಡ್ತಿ:
"ನಿಸ್ಸಂಶಯವಾಗಿ ಮೂರು ಮಾದರಿಯಲ್ಲಿ ಖಾಯಂ ಆಟಗಾರರಾಗಿರುವ ವಿರಾಟ್, ರೋಹಿತ್ ಮತ್ತು ಬುಮ್ರಾ ತಮ್ಮ ಎ ಪ್ಲಸ್ನಲ್ಲಿ ಮುಂದುವರಿಯಲಿದ್ದಾರೆ. ಆದರೆ ರಾಹುಲ್ ಮತ್ತು ಪಂತ್ ಪ್ರಸ್ತುತ ತಾವಾಗಿಯೇ ನಿಧಾನವಾಗಿ ಮೂರು ಸ್ವರೂಪಗಳಲ್ಲೂ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಇಬ್ಬರು ಈ ಬಾರಿ ಬಡ್ತಿ ಪಡೆಯುವ ಸಾಧ್ಯತೆ ಇದೆ " ಎಂದು ಬಿಸಿಸಿಐ ಮೂಲ ಪಿಟಿಐಗೆ ಮಾಹಿತಿ ನೀಡಿದೆ.