ಕರ್ನಾಟಕ

karnataka

ETV Bharat / sports

ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ: ಮಹತ್ವದ ಘೋಷಣೆ ಮಾಡಿದ ಬಿಸಿಸಿಐ

ಬಿಸಿಸಿಐ ಒಪ್ಪಂದ ಮಾಡಿಕೊಂಡಿರುವ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತಂದಿದೆ. ಈ ಮೂಲಕ ಇಷ್ಟು ದಿನಗಳವರೆಗೆ ಇದ್ದ ಅಸಮಾನತೆಯನ್ನು ಅಳಿಸಿಹಾಕಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಶಾ ಟ್ವೀಟ್‌ ಮಾಡಿದ್ದಾರೆ.

BCCI announces implementation of pay equity policy for contracted Indian women cricketers
BCCI announces implementation of pay equity policy for contracted Indian women cricketers

By

Published : Oct 27, 2022, 1:49 PM IST

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಮಹತ್ವದ ಘೋಷಣೆ ಹೊರಡಿಸಿದ್ದು, ಗುತ್ತಿಗೆಯಲ್ಲಿರುವ ಮಹಿಳಾ ಕ್ರಿಕೆಟಿಗರಿಗೆ ಪುರುಷರಷ್ಟೇ ಸಮಾನ ವೇತನ ಸಿಗಲಿದೆ ಎಂದು ಹೇಳಿದೆ. ಮ್ಯಾಚ್ ಫೀಸ್ ವಿಷಯದಲ್ಲಿ ಪುರುಷರಷ್ಟೇ ಸಮಾನ ವೇತನ ನೀಡುವಂತೆ ಮಹಿಳಾ ಕ್ರಿಕೆಟಿಗರು ಆಗ್ರಹಿಸುತ್ತಲೇ ಬಂದಿದ್ದರು. ಸದ್ಯ ಅವರ ಬಹುದಿನಗಳ ಬೇಡಿಕೆ ಈಡೇರಿದ್ದು ಸರಿಸಮನಾಗಿ ವೇತನ ತರುವ ಬಿಸಿಸಿಐ ನಿರ್ಧಾರಕ್ಕೆ ಹಲವು ಕ್ರಿಕೆಟ್​ ತಾರೆಯರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾರತಮ್ಯವನ್ನು ಎದುರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ನಮ್ಮ ಒಪ್ಪಂದದ ಪ್ರಕಾರ ಮಹಿಳಾ ಕ್ರಿಕೆಟಿಗರಿಗೆ ನಾವು ವೇತನ ಸಮಾನ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಕಾಲಿಟ್ಟಂತೆ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಮಹಿಳಾ ಕ್ರಿಕೆಟಿಗರಿಗೆ ಅವರ ಪುರುಷ ಕ್ರಿಕೆಟಿಗರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ.

ಟೆಸ್ಟ್​ ಕ್ರಿಕೆಟ್​​ಗೆ (15 ಲಕ್ಷ ರೂ.), ಏಕದಿನ ಪಂದ್ಯಕ್ಕೆ (6 ಲಕ್ಷ ರೂ.), T20I (3 ಲಕ್ಷ ರೂ.) ಅನ್ನು ಪಾವತಿಸುವುದು ನನ್ನ ಬದ್ಧತೆಯಾಗಿದೆ. ಇದಷ್ಟೇ ಅಲ್ಲದೇ ಅವರ ಬೆಂಬಲಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್‌ಗೆ ಧನ್ಯವಾದ ಹೇಳುತ್ತೇನೆ. ಜೈ ಹಿಂದ್ ಎಂದು ಬಿಸಿಸಿಐ ಕಾರ್ಯದರ್ಶಿ ಶಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ಪಾಕ್​ ವಿರುದ್ಧ ಅಮೋಘ ಆಟದ ಫಲ: ಟಿ20 ರ‍್ಯಾಂಕಿಂಗ್​ನಲ್ಲಿ ಏರಿಕೆ ಕಂಡ ಕೊಹ್ಲಿ

ABOUT THE AUTHOR

...view details