ಮುಂಬೈ (ಮಹಾರಾಷ್ಟ್ರ):ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ 2022-23ರ ಸೀಸನ್ಗಾಗಿ ಟೀಮ್ ಇಂಡಿಯಾದ ವಾರ್ಷಿಕ ಆಟಗಾರರ ಒಪ್ಪಂದಗಳನ್ನು ಪ್ರಕಟಿಸಲಾಗಿದೆ. ಮಹಿಳಾ ಕ್ರಿಕೆಟ್ ತಂಡದ ಒಪ್ಪಂದಗಳನ್ನು ಮೂರು ಗ್ರೇಡ್‌ಗಳಾಗಿ ವಿಂಗಡಿಸಲಾಗಿದೆ. ಪುರುಷರ ತಂಡವನ್ನು ನಾಲ್ಕು ಗ್ರೇಡ್‌ಗಳಾಗಿ ವಿಭಜಿಸಲಾಗಿದೆ. ಮಹಿಳಾ ಕ್ರಿಕೆಟ್ ತಂಡದಲ್ಲಿ ಎ-ಪ್ಲಸ್ ಗ್ರೇಡ್ ಅನ್ನು ಇಟ್ಟುಕೊಂಡಿಲ್ಲ. ಈ ಒಪ್ಪಂದದಲ್ಲಿ ಮಹಿಳಾ ಕ್ರಿಕೆಟಿಗರನ್ನು ಎ, ಬಿ ಮತ್ತು ಸಿ ಗ್ರೇಡ್‌ಗಳಾಗಿ ವಿಭಜಿಸಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಒಪ್ಪಂದದ ಪಟ್ಟಿ ಬಿಡುಗಡೆ:"ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2022-23ರ ಸೀಸನ್ಗಾಗಿ ಟೀಮ್ ಇಂಡಿಯಾ (ಹಿರಿಯ ಮಹಿಳಾ ಆಟಗಾರರು) ವಾರ್ಷಿಕ ಆಟಗಾರರ ಒಪ್ಪಂದಗಳನ್ನು ಗುರುವಾರ ಪ್ರಕಟಿಸಿದೆ" ಎಂದು ಬಿಸಿಸಿಐ ತಿಳಿಸಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಮುಂಬರುವ ಸೀಸನ್ನಲ್ಲಿ ಬಿಸಿಸಿಐ ಕೇಂದ್ರ ಒಪ್ಪಂದದ ಪಟ್ಟಿಯಲ್ಲಿ ಅಗ್ರ ಎ-ಗ್ರೇಡ್ ನಲ್ಲಿದ್ದಾರೆ. ಅಂದ್ರೆ ಐಎನ್‌ಆರ್ 50 ಲಕ್ಷ ಮೌಲ್ಯದ ಗ್ರೇಡ್-ಎ ವಿಭಾಗದಲ್ಲಿ ಸ್ಥಾನ ಗಳಿಸಿದ್ದಾರೆ.
ಐದರಿಂದ ಮೂರಕ್ಕೆ ಇಳಿದ ಅಗ್ರ ಆಟಗಾರರು:ಅಗ್ರ ಬ್ರಾಕೆಟ್‌ನಲ್ಲಿರುವ ಆಟಗಾರರನ್ನು ಕಳೆದ ವರ್ಷ ಐದರಿಂದ ಮೂರಕ್ಕೆ ಇಳಿಸಲಾಗಿದೆ. ರಾಜೇಶ್ವರಿ ಗಾಯಕ್ವಾಡ್ ಗ್ರೇಡ್- ಬಿ, 30 ಲಕ್ಷ ರೂಪಾಯಿಗೆ ಇಳಿದಿದ್ದಾರೆ. ಪೂನಮ್ ಯಾದವ್ ಕೇಂದ್ರೀಯ ಒಪ್ಪಂದವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಯುವ ಆಟಗಾರರಾದ ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ ಮತ್ತು ಶಫಾಲಿ ವರ್ಮಾ ಗ್ರೇಡ್-ಬಿ ನಲ್ಲಿ ಇದ್ದಾರೆ. ಹಿಂದಿನ ಇಬ್ಬರು, ರೇಣುಕಾ ಠಾಕೂರ್ ಜೊತೆಗೆ, ಕಳೆದ ವರ್ಷದಲ್ಲಿ ವಿಶೇಷವಾಗಿ 2022ರ ಮಹಿಳಾ ವಿಶ್ವಕಪ್ ಮತ್ತು 2023 ರ ಟಿ-20 ವಿಶ್ವಕಪ್‌ನಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನಗಳ ನಂತರ, ಗ್ರೇಡ್- ಸಿ ನಿಂದ ಗ್ರೇಡ್- ಬಿ ಗೆ ಜಿಗಿತ ಕಂಡುದ್ದಾರೆ.