ಕರ್ನಾಟಕ

karnataka

ETV Bharat / sports

ಜನವರಿ 13ರಿಂದ ರಣಜಿ ಟ್ರೋಫಿ ಆರಂಭ: ಒಂದೇ ಗುಂಪಿನಲ್ಲಿವೆ ಮುಂಬೈ, ಕರ್ನಾಟಕ, ಡೆಲ್ಲಿ - ಸಯ್ಯದ್ ಮುಷ್ತಾಕ್ ಅಲಿ

ಸೋಮವಾರ ಬಿಸಿಸಿಐ ಡೊಮೆಸ್ಟಿಕ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಡೆಲ್ಲಿ ನವೆಂಬರ್​ 22ರಂದು ಸಯ್ಯದ್ ಮುಷ್ತಾಕ್ ಅಲಿ ಫೈನಲ್​ಗೆ ಆತಿಥ್ಯ ವಹಿಸಲಿದೆ. ಕೋಲ್ಕತ್ತಾ ಮಾರ್ಚ್​ 16ರಂದು ರಣಜಿ ಟ್ರೋಫಿ ಫೈನಲ್​ಗೆ ಆತಿಥ್ಯ ವಹಿಸಲಿದೆ.​

BCCI announce domestic tournament scheduled
ಬಿಸಿಸಿಐ ಟ್ರೋಫಿ

By

Published : Aug 31, 2021, 4:55 PM IST

ಮುಂಬೈ:ಭಾರತೀಯ ಪುರುಷರ ದೇಶಿ ಋತು ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿ ಮೂಲಕ ನವೆಂಬರ್​ ರಿಂದ ಆರಂಭಗೊಳ್ಳಲಿದೆ. ದೇಶದ ಪ್ರಸಿದ್ಧ ಪ್ರಥಮ ದರ್ಜೆ ಟೂರ್ನಿಯಾಗಿರುವ ರಣಜಿ ಟ್ರೋಫಿ ಜನವರಿ 13ರಿಂದ ಆರಂಭವಾಗಲಿದೆ. ಏಕದಿನ ಟೂರ್ನಮೆಂಟ್ ಆಗಿರುವ ವಿಜಯ ಹಜಾರೆ ಡಿಸೆಂಬರ್​ 8ರಿಂದ ಆರಂಭವಾಗಲಿದೆ. ಈ ಮೂರು ಟೂರ್ನಮೆಂಟ್​ಗಳು ತಟಸ್ಥ ಸ್ಥಳಗಳಲ್ಲಿ ನಡೆಯಲಿವೆ.

ಸೋಮವಾರ ಬಿಸಿಸಿಐ ಡೊಮೆಸ್ಟಿಕ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಡೆಲ್ಲಿ ನವೆಂಬರ್​ 22ರಂದು ಸಯ್ಯದ್ ಮುಷ್ತಾಕ್ ಅಲಿ ಫೈನಲ್​ಗೆ ಆತಿಥ್ಯ ವಹಿಸಲಿದೆ. ಕೋಲ್ಕತ್ತಾ ಮುಂದಿನ ವರ್ಷದ ಮಾರ್ಚ್​ 16ರಂದು ರಣಜಿ ಟ್ರೋಫಿ ಫೈನಲ್​ಗೆ ಆತಿಥ್ಯ ವಹಿಸಲಿದೆ.​

ರಣಜಿ ಟ್ರೋಫಿ ಬೆಂಗಳೂರು, ಮುಂಬೈ, ಕೋಲ್ಕತ್ತಾ, ಅಹ್ಮದಾಬಾದ್​, ತಿರುವನಂತಪುರಂ ಮತ್ತು ಚೆನ್ನೈನಲ್ಲಿ ಆರಂಭವಾಗಲಿದೆ. ಕೋಲ್ಕತ್ತಾ ಎಲ್ಲಾ ನಾಕೌಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಲೀಗ್​ ಆರಂಭಕ್ಕೂ ಮುನ್ನ ಮತ್ತು ನಾಕೌಟ್ ಪಂದ್ಯಗಳಿಗೂ ಮುನ್ನ 5 ದಿನಗಳ ಆಟಗಾರರನ್ನು ಕ್ವಾರಂಟೈನ್​ ಮಾಡಬೇಕಾಗಿದೆ.

ಸಯ್ಯದ್​ ಮುಷ್ತಾಕ್ ಅಲಿ ಟೂರ್ನಮೆಂಟ್ ಲಕ್ನೋ, ವಿಜಯವಾಡ, ಹರಿಯಾಣ, ಡೆಲ್ಲಿ, ಗುವಾಹಟಿ, ಬರೋಡಗಳಲ್ಲಿ ನಡೆಯಲಿವೆ. ಡೆಲ್ಲಿ ನಾಕೌಟ್ ಪಂದ್ಯಗಳಿಗೆ ಆತಿಥ್ಯವಹಿಸಲಿದೆ. ಆದರೆ ವಿಜಯ್ ಹಜಾರೆ ಟ್ರೋಫಿಗೆ ಬಿಸಿಸಿಐ ಇನ್ನೂ ಸ್ಥಳವನ್ನು ನಿಗದಿಮಾಡಿಲ್ಲ.

ರಣಜಿ ಟೂರ್ನಿಯಲ್ಲಿನ 5 ಪ್ರಮುಖ ಗುಂಪು ಮತ್ತು ಒಂದು ಪ್ಲೇಟ್​ ಗುಂಪು ಇರಲಿದೆ.

ಕರ್ನಾಟಕ, ಮುಂಬೈ ಮತ್ತ ಡೆಲ್ಲಿ ತಂಡಗಳಿಗೆ ಒಂದೇ ಗುಂಪಿನಲ್ಲಿ ಸ್ಥಾನ:

ರಣಜಿ ಟ್ರೋಫಿಯನ್ನು ಹೆಚ್ಚು ಬಾರಿ ಗೆದ್ದಿರುವ ಅಗ್ರ ಮೂರು ತಂಡಗಳಾದ ಮುಂಬೈ(41), ಕರ್ನಾಟಕ(8) ಮತ್ತು ಡೆಲ್ಲಿ(7) ತಂಡಗಳುಎಲೈಟ್​ ಸಿ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಮೂರು ಬಲಿಷ್ಠ ತಂಡಗಳ ಜೊತೆ ಹೈದರಾಬಾದ್​, ಮಹಾರಾಷ್ಟ್ರ ಮತ್ತು ಉತ್ತರಾಖಂಡ ತಂಡಗಳು ಅವಕಾಶ ಪಡೆದಿವೆ. ಈ ಗುಂಪಿನ ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿವೆ.

ಎಲೈಟ್ ಎ: ಗುಜರಾತ್, ಪಂಜಾಬ್, ಹಿಮಾಚಲ, ಮಧ್ಯ ಪ್ರದೇಶ, ಸೇವೆಗಳು ಮತ್ತು ಅಸ್ಸೋಂ (ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ)

ಎಲೈಟ್ ಬಿ: ಬಂಗಾಳ, ವಿದರ್ಭ, ರಾಜಸ್ಥಾನ, ಕೇರಳ, ಹರಿಯಾಣ ಮತ್ತು ತ್ರಿಪುರಾ (ಬೆಂಗಳೂರು)

ಎಲೈಟ್ ಡಿ: ಸೌರಾಷ್ಟ್ರ, ತಮಿಳುನಾಡು, ರೈಲ್ವೇಸ್, ಜಮ್ಮು -ಕಾಶ್ಮೀರ, ಜಾರ್ಖಂಡ್ ಮತ್ತು ಗೋವಾ (ಅಹಮದಾಬಾದ್‌)

ಎಲೈಟ್ ಇ: ಆಂದ್ರಪ್ರದೇಶ, ಉತ್ತರ ಪ್ರದೇಶ, ಬರೋಡಾ, ಒಡಿಶಾ, ಛತ್ತೀಸ್‌ಗಡ ಮತ್ತು ಪಾಂಡಿಚೇರಿ (ತಿರುವನಂತಪುರ )

ಪ್ಲೇಟ್​​ : ಚಂಡೀಗಡ, ಮೇಘಾಲಯ, ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕೀಂ, ಅರುಣಾಚಲ (ಚೆನ್ನೈ)

ABOUT THE AUTHOR

...view details