ಮುಂಬೈ (ಮಹಾರಾಷ್ಟ್ರ):ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಇದು ಸಿಹಿ ಸುದ್ದಿ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜೂನ್ 9 ರಿಂದ ಪ್ರಾರಂಭವಾಗುವ 5 ಪಂದ್ಯಗಳ ಟಿ-20 ಸರಣಿಗೆ ಕ್ರೀಡಾಂಗಣಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿ ಮಾಡಲು ಬಿಸಿಸಿಐ ಅನುಮತಿಸಿದೆ.
ಕೋವಿಡ್ ಕಾರಣಕ್ಕಾಗಿ ಕ್ರೀಡಾಂಗಣಗಳಿಗೆ ನಿರ್ದಿಷ್ಟ ಅಭಿಮಾನಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಇದೀಗ ಸೋಂಕಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಕ್ರೀಡಾಂಗಣ ಭರ್ತಿಗೆ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ.