ಪಾರ್ಲ್(ದ.ಆಫ್ರಿಕಾ): ನಾಯಕ ಟೆಂಬ ಬವೂಮ ಜವಾಬ್ದಾರಿ ಮತ್ತು ರಾಸಿ ವ್ಯಾನ್ ಡರ್ ಡಸೆನ್ ಅವರ ಅಬ್ಬರದ ಶತಕಗಳ ನೆರವಿನಿಂದ ಅತಿಥೇಯ ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 297 ರನ್ಗಳ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. 68 ರನ್ಗಳಿಸುವಲ್ಲಿ ಜನ್ನೆಮನ್ ಮಲನ್(6), ಕ್ವಿಂಟನ್ ಡಿ ಕಾಕ್(27) ಮತ್ತು ಐಡೆನ್ ಮ್ಯಾರ್ಕ್ರಮ್(4) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು.
ದ್ವಿಶತಕದ ಜೊತೆಯಾಟ:
ಆದರೆ 4ನೇ ವಿಕೆಟ್ಗೆ ಒಂದಾದ ನಾಯಕ ಬವೂಮ ಮತ್ತು ಡಸೆನ್ 204ರನ್ಗಳ ಬೃಹತ್ ಜೊತೆಯಾಟ ನೀಡಿ ಆರಂಭಿಕ ಆಘಾತದಿಂದ ಪಾರುಮಾಡಿದ್ದಲ್ಲದೆ, 297 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು. ಡಸೆನ್ 96 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 129 ರನ್ಗಳಿಸಿದರೆ, ನಾಯಕ ಬವೂಮ 143 ಎಸೆತಗಳಲ್ಲಿ 8 ಬೌಂಡರಿ ಸಹಿತ 110 ರನ್ಗಳಿಸಿ 49ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಭಾರತದ ಪರ ಬುಮ್ರಾ 48ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಅಶ್ವಿನ್ 53ಕ್ಕೆ1 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 72, ಭುವನೇಶ್ವರ್ 64 ಮತ್ತು ಚಹಲ್ 53 ರನ್ ಬಿಟ್ಟುಕೊಟ್ಟು ದುಬಾರಿಯಾಗುವುದರ ಜೊತೆಗೆ ವಿಕೆಟ್ ಪಡೆಯುವಲ್ಲಿ ವಿಫಲರಾಗಿದರು.
ಇದನ್ನೂ ಓದಿ:22 ಬೌಂಡರಿ, 4 ಸಿಕ್ಸರ್ ಸಹಿತ 154 ರನ್ ... ಬಿಬಿಎಲ್ನಲ್ಲಿ ಮ್ಯಾಕ್ಸ್ವೆಲ್ ದಾಖಲೆಗಳ ಸುರಿಮಳೆ