ಕರ್ನಾಟಕ

karnataka

ETV Bharat / sports

ಹೊಡಿಬಡಿ ಕ್ರಿಕೆಟ್​ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರಿವರು! - Chris Gayle most sucessful batter in T20

ಚುಟುಕು ಕ್ರಿಕೆಟ್​ನಲ್ಲಿ ಶತಕ ಗಳಿಸುವುದು ಕಷ್ಟವೇ. ಆದರೂ, ಅದು ಕೆಲ ಆಟಗಾರರಿಗೆ ಸಿದ್ಧ ಶಕ್ತಿಯಾಗಿದೆ. ಕ್ರಿಸ್​ಗೇಲ್​ ಇದರಲ್ಲಿ ಉಚ್ಛ್ರಾಯ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ, ಈ ಶತಕದ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮೂವರು ಆಟಗಾರರಿದ್ದಾರೆ.

ಹೊಡಿಬಡಿ ಕ್ರಿಕೆಟ್​ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರಿವರು
ಹೊಡಿಬಡಿ ಕ್ರಿಕೆಟ್​ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರರಿವರು

By

Published : Apr 17, 2023, 5:31 PM IST

ಕ್ರಿಕೆಟ್​ನಲ್ಲಿ ಶತಕ ಬಾರಿಸುವುದು ಆಟಗಾರನಿಗೆ ಸವಾಲು. ಅದರಲ್ಲೂ ಚುಟುಕು ಕ್ರಿಕೆಟ್​ನಲ್ಲಿ ಮೂರಂಕಿ ಗಳಿಸುವುದು ಸುಲಭದ ಮಾತಲ್ಲ. ಐಪಿಎಲ್​ನಂತಹ ದೇಶಿ ಟೂರ್ನಿಗಳು ಬಂದ ಮೇಲೆ ಕ್ರಿಕೆಟ್​ ಸ್ವರೂಪವೇ ಬದಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಕೆಲವು ಆಟಗಾರರು ತಮ್ಮ ಕೈಚಳಕ ತೋರಿಸಿ ಶತಕ ಸಾಧನೆ ಮಾಡಿದ್ದಿದೆ.

ಈಚೆಗೆ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್​ ಅಜಂ ಅಜೇಯ ಶತಕ ಸಿಡಿಸಿದರು. ಈ ಮೂಲಕ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಗಿಟ್ಟಿಸಿಕೊಂಡರು. ಟಿ20ಯಲ್ಲಿ ಶತಕಗಳ ಸರದಾರನಾದ ವೆಸ್ಟ್​ ಇಂಡೀಸ್​ ದೈತ್ಯ ಕ್ರಿಸ್​​ಗೇಲ್​ ಈ ಪಟ್ಟಿಯಲ್ಲಿ ಮೇಲುಸ್ಥರದಲ್ಲಿದ್ದಾರೆ. ಈತನ ದಾಖಲೆ ಸರಿಗಟ್ಟುವುದು ಬಹುಶಃ ಯಾವ ಆಟಗಾರನಿಗೂ ಕಷ್ಟಸಾಧ್ಯವೇ ಸರಿ.

ಬ್ಯಾಟ್​ನಿಂದಲೇ ರಂಜಿಸುವ ಕ್ರಿಸ್​ಗೇಲ್​

ಕ್ರಿಸ್ ಗೇಲ್:ಕೆರಿಬಿಯನ್​ ಹಿಟ್ಟರ್​ ಗೇಲ್ ಟಿ20 ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್. ಇವರು ಆಡಿದ 463 ಟಿ20 ಪಂದ್ಯಗಳಲ್ಲಿ 14,562 ರನ್‌ಗಳನ್ನು ಚಚ್ಚಿದ್ದಾರೆ. ಇದರಲ್ಲಿ 22 ಶತಕಗಳನ್ನು ಬಾರಿಸಿದ್ದಾರೆ. ಔಟಾಗದೇ 175 ಅವರ ಗರಿಷ್ಠ ಸ್ಕೋರ್. ಇದು ಚುಟುಕು ಕ್ರಿಕೆಟ್​ನಲ್ಲಿ ದಾಖಲೆಯೇ ಸರಿ. ಗೇಲ್​ರ ಈ ದಾಖಲೆಯನ್ನು ಸರಿಗಟ್ಟುವ ಅಥವಾ ಮುರಿಯುವ ಸಮಕಾಲೀನ ಕ್ರಿಕೆಟಿಗರು ಸದ್ಯಕ್ಕಂತೂ ಇಲ್ಲ.

ಪಾಕಿಸ್ತಾನದ ಬಾಬರ್​ ಅಜಂ

ಬಾಬರ್ ಆಜಂ:ಪಾಕಿಸ್ತಾನದ ತಂಡದ ನಾಯಕ ಬಾಬರ್ ಅಜಮ್ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಈಚೆಗಿನ ಟಿ20 ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಚುಟುಕು ಕ್ರಿಕೆಟ್​ನಲ್ಲಿ ಒಟ್ಟು 9 ಶತಕಗಳನ್ನು ಬಾರಿಸಿದ್ದಾರೆ. ಬಾಬರ್​ 257 ಪಂದ್ಯಗಳನ್ನಾಡಿದ್ದು, 9,181 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಮೈಕೆಲ್ ಕ್ಲಿಂಗರ್

ಮೈಕೆಲ್ ಕ್ಲಿಂಗರ್:ಆಸ್ಟ್ರೇಲಿಯಾದ ಬ್ಯಾಟರ್​ ಮೈಕೆಲ್ ಕ್ಲಿಂಗರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಬಿಗ್​ಬ್ಯಾಶ್​ ಲೀಗ್​ ಸೇರಿದಂತೆ ಹಲವು ಟಿ20 ಪಂದ್ಯಗಳಲ್ಲಿ ತಮ್ಮ ಬ್ಯಾಟ್​ ಝಳಪಿಸಿದ್ದಾರೆ. 206 ಪಂದ್ಯಗಳನ್ನು ಆಡಿರುವ ಕ್ಲಿಂಗರ್​ ಈ ಮಾದರಿಯಲ್ಲಿ 198 ಇನ್ನಿಂಗ್ಸ್‌ಗಳಲ್ಲಿ ಒಟ್ಟು 5960 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳನ್ನು ಗಳಿಸಿದ್ದಾರೆ. 126 ಅತ್ಯಧಿಕ ಸ್ಕೋರ್ ಆಗಿದೆ.

ಆಸೀಸ್​ ಹಿರಿಯ ಆಟಗಾರ ಡೇವಿಡ್​ ವಾರ್ನರ್​

ಡೇವಿಡ್ ವಾರ್ನರ್:ಆಸ್ಟ್ರೇಲಿಯಾದ ಇನ್ನೊಬ್ಬ ಹಿರಿಯ ಆಟಗಾರ ಡೇವಿಡ್​ ವಾರ್ನರ್ ಟಿ20 ಮಾದರಿಗೆ ಹೇಳಿ ಮಾಡಿದ ಬ್ಯಾಟರ್​. ಅಂತಾರಾಷ್ಟ್ರೀಯ, ಐಪಿಎಲ್​, ಬಿಬಿಎಲ್​ ಸೇರಿದ 347 ಚುಟುಕು ಪಂದ್ಯವಾಡಿರುವ ವಾರ್ನರ್ 8 ಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯುತ್ತಮ ಇನ್ನಿಂಗ್ಸ್ ಅಜೇಯ 135 ರನ್​ ಆಗಿದೆ. ವಿಶೇಷ ಅಂದರೆ, ವಾರ್ನರ್​ ಟಿ20ಯಲ್ಲಿ ಅರ್ಧಶತಕಗಳ ಶತಕ ಬಾರಿಸಲು ಇನ್ನೂ 4 ಫಿಫ್ಟಿ ಬೇಕಿದೆ. ಎಡಗೈ ಬ್ಯಾಟರ್​ ಈವರೆಗೂ 11,407 ರನ್​ ಗಳಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯರೋನ್ ಫಿಂಚ್

ಆ್ಯರೋನ್ ಫಿಂಚ್:ಆಸೀಸ್​ನ ಮಾಜಿ ಆಟಗಾರ ಆ್ಯರೋನ್​ ಫಿಂಚ್​ ಚುಟುಕು ಕ್ರಿಕೆಟ್​ನಲ್ಲೇ ಹೆಚ್ಚು ಯಶಸ್ವಿಯಾಗಿದ್ದಾರೆ. ಈ ಮಾದರಿಯಲ್ಲಿ ಆಸೀಸ್​ ತಂಡದ ನಾಯಕತ್ವ ವಹಿಸಿದ್ದ ಆಟಗಾರ ಒಟ್ಟಾರೆ, 382 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 11,392 ರನ್‌ಗಳನ್ನು ಪೇರಿಸಿದ್ದು, 8 ಶತಕಗಳು ಇವರ ಖಾತೆಯಲ್ಲಿವೆ. 172 ರನ್‌ ಅವರ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ.

ಇದನ್ನೂ ಓದಿ:ಐಪಿಎಲ್​ಗೆ ಕಾಲಿಟ್ಟ ಪುತ್ರನಿಗೆ ಸಚಿನ್​ ಭಾವನಾತ್ಮಕ ಸಂದೇಶ: ಕ್ರಿಕೆಟಿಗರಿಂದ ಮರಿ ತೆಂಡೂಲ್ಕರ್​ಗೆ ಆಲ್​ ದಿ ಬೆಸ್ಟ್​

ABOUT THE AUTHOR

...view details