ಆಂಟಿಗುವಾ :2022ಕ್ಕೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬಾರ್ಬಡೋಸ್ ಮಹಿಳಾ ತಂಡ ವೆಸ್ಟ್ ಇಂಡೀಸ್ ಪ್ರತಿನಿಧಿಯಾಗಿ ಸ್ಪರ್ಧಿಸಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಭಾನುವಾರ ಘೋಷಿಸಿದೆ.
CWI ಹಲವು ರಾಷ್ಟ್ರಗಳಿಂದ ಕೂಡಿದ ಕ್ರಿಕೆಟ್ ಮಂಡಳಿಯಾಗಿದೆ. ಕ್ರಿಕೆಟ್ ಹೊರತುಪಡಿಸಿದರೆ ಉಳಿದೆಲ್ಲಾ ಕ್ರೀಡೆಗಳಲ್ಲೂ ಆ ರಾಷ್ಟ್ರಗಳು ಪ್ರತ್ಯೇಕವಾಗಿ ಗ್ಲೋಬಲ್ ಈವೆಂಟ್ಗಳಲ್ಲಿ ಭಾಗವಹಿಸುತ್ತವೆ. ಆದ್ದರಿಂದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಒಕ್ಕೂಟವಾಗಿ ವೆಸ್ಟ್ ಇಂಡೀಸ್ ಭಾಗವಹಿಸಲು ಅವಕಾಶವಿಲ್ಲದ ಕಾರಣ ಮಂಡಳಿ ಆಯೋಜಿಸುವ ದೇಶಿ ಟೂರ್ನಮೆಂಟ್ನಲ್ಲಿ ವಿಜೇತರಾದ ತಂಡವನ್ನು ಕಳುಹಿಸಲು ನಿರ್ಧರಿಸಿತ್ತು.
ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತಾ ಟೂರ್ನಮೆಂಟ್ ಆಗಿದ್ದ ಟಿ20 ಬ್ಲಾಜ್ ಅನ್ನು ಕೋವಿಡ್-19 ಕಾರಣ ಕ್ರಿಕೆಟ್ ವೆಸ್ಟ್ ಇಂಡೀಸ್ ರದ್ದುಪಡಿಸಿತ್ತು. ಹಾಗಾಗಿ, ಕಳೆದ ವರ್ಷದ ವಿನ್ನರ್ ಆಗಿರುವ ಬಾರ್ಬಡೋಸ್ ತಂಡವನ್ನೇ ಕಾಮನ್ವೆಲ್ತ್ ಗೇಮ್ಸ್ನಲ್ಲಿ ವೆಸ್ಟ್ ಇಂಡೀಸ್ ಮಂಡಳಿಯ ಪ್ರತಿನಿಧಿಯಾಗಿ ಸ್ಪರ್ಧಿಸಲು ಬೋರ್ಡ್ ನಿರ್ಧರಿಸಿದೆ. ಇದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC) ಒಪ್ಪಿಗೆ ಸೂಚಿಸಿದೆ ಎಂದು CWI ಹೇಳಿಕೆ ಬಿಡುಗಡೆ ಮಾಡಿದೆ.