ಕರ್ನಾಟಕ

karnataka

By

Published : Sep 8, 2021, 7:48 PM IST

ETV Bharat / sports

ನ್ಯೂಜಿಲೆಂಡ್‌​ ವಿರುದ್ಧ ಮೊದಲ ಟಿ-20 ಸರಣಿ ಗೆದ್ದ ಬಾಂಗ್ಲಾದೇಶ

ಅದ್ಭುತ ಫಾರ್ಮ್​​ನಲ್ಲಿರುವ ಬಾಂಗ್ಲಾದೇಶ ಇದೀಗ ನ್ಯೂಜಿಲ್ಯಾಂಡ್​ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ.

Bangladesh won
Bangladesh won

ಢಾಕಾ: ಚುಟುಕು ಕ್ರಿಕೆಟ್​ನಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡಕ್ಕೆ ಶಾಕ್​ ನೀಡಿರುವ ಬಾಂಗ್ಲಾದೇಶ ಐದು ಟಿ-20 ಪಂದ್ಯಗಳ ಸರಣಿಯಲ್ಲಿ 3-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ಒಂದು ಪಂದ್ಯ ಬಾಕಿ ಇರುವಾಗಲೇ ಕಿವೀಸ್ ವಿರುದ್ಧ ಚೊಚ್ಚಲ ಟಿ-20 ಸರಣಿ ಗೆದ್ದಿರುವ ಸಾಧನೆ ಮಾಡಿದೆ.

ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ 4ನೇ ಟಿ-20 ಪಂದ್ಯದಲ್ಲಿ 6 ವಿಕೆಟ್​ಗಳ ಗೆಲುವು ದಾಖಲು ಮಾಡುವ ಮೂಲಕ ಮಹ್ಮದುಲ್ಲಾ ನೇತೃತ್ವದ ತಂಡ ಈ ಸಾಧನೆ ಮಾಡಿದೆ.

ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ ಮಹ್ಮದುಲ್ಲಾ

4ನೇ ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ 19.3 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 93 ರನ್​ಗಳಿಕೆ ಮಾಡಿತು. ತಂಡದ ಪರ ವಿಲ್​ ಯಂಗ್​ 43 ಹಾಗೂ ಲಾಥಮ್​ 21 ರನ್​ಗಳಿಸಿ ಗರಿಷ್ಠ ಸ್ಕೋರರ್‌ ಆದರು. ಉಳಿದಂತೆ ಫಿನ್​ ಆಲನ್​ 12 ರನ್​​, ರವೀಂದ್ರ 0, ನಿಕೋಲಸ್​​​ 1, ಗ್ರ್ಯಾಂಡ್ ಹೋಂ 0, ಅಜಾಜ್ ಪಟೇಲ್​ 4 ರನ್​ಗಳಿಕೆ ಮಾಡಿದರು.

ಬಾಂಗ್ಲಾದೇಶದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಹ್ಮದ್​​ ಹಾಗೂ ಮುಸ್ತಫಿಜುರ್ ತಲಾ 4 ವಿಕೆಟ್​ ಪಡೆದುಕೊಂಡರೆ, ಸೈಫುದ್ದೀನ್​, ಹಸನ್ 1 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ: 2ನೇ T-20ಯಲ್ಲೂ ಕಿವೀಸ್​​​ ವಿರುದ್ಧ ಗೆದ್ದ ಬಾಂಗ್ಲಾ... ತವರಿನಲ್ಲಿ ನಡೆದ 11 ಪಂದ್ಯಗಳ ಪೈಕಿ 10ರಲ್ಲಿ ಗೆದ್ದ ಬಾಂಗ್ಲಾದೇಶ!

94 ರನ್​ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಲಿಟನ್ ದಾಸ್​​ 6, ಶಕೀಬ್ ಅಲ್ ಹಸನ್​​ 8 ಹಾಗೂ ರಹೀಮ್​ 0 ವಿಕೆಟ್​ ಕಳೆದುಕೊಂಡರೂ ಕೂಡ ಮೊಹಮ್ಮದ್ ನಯೀಮ್ 29ರನ್​​ ಹಾಗೂ ಕ್ಯಾಪ್ಟನ್​ ಮಹ್ಮದುಲ್ಲಾ ಅಜೇಯ 43ರನ್​​ಗಳ ನೆರವಿನಿಂದ ಗೆಲುವಿನ ದಡ ಸೇರಿತು.

ನ್ಯೂಜಿಲ್ಯಾಂಡ್-ಬಾಂಗ್ಲಾ 4ನೇ ಟಿ20 ಪಂದ್ಯ

ತಂಡ 19.1 ಓವರ್​ಗಳಲ್ಲಿ 4 ವಿಕೆಟ್​​ ನಷ್ಟಕ್ಕೆ 96 ರನ್​ಗಳಿಕೆ ಮಾಡಿ ಚೊಚ್ಚಲ ಟಿ-20 ಸರಣಿ ಗೆದ್ದ ಸಾಧನೆ ಮಾಡಿತು. ತಂಡದ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಅಹ್ಮದ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕಳೆದ ಕೆಲ ತಿಂಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಬಾಂಗ್ಲಾದೇಶ ಈಗಾಗಲೇ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನಕ್ಕೂ ಟಿ-20 ಕ್ರಿಕೆಟ್​ನಲ್ಲಿ ಸೋಲಿನ ರುಚಿ ತೋರಿಸಿದ್ದು, ಇದೀಗ ನ್ಯೂಜಿಲ್ಯಾಂಡ್ ಮೇಲೆ ಸವಾರಿ ಮಾಡಿದೆ.

ABOUT THE AUTHOR

...view details