ಡಾಕಾ (ಬಾಂಗ್ಲಾದೇಶ): ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 546 ರನ್‌ಗಳ ಬೃಹತ್ ಮೊತ್ತದ ಗೆಲುವನ್ನು ದಾಖಲಿಸಿ 21 ನೇ ಶತಮಾನ ಕ್ರಿಕೆಟ್ನ ದೊಡ್ಡ ಗೆಲುವನ್ನು ಬರೆದಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ದೊಡ್ಡ ಅಂತರದ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಟೆಸ್ಟ್ನಲ್ಲಿ ಎರಡು ಬೃಹತ್ ಗೆಲುವುಗಳು ದಾಖಲಾಗಿದ್ದವು. ಇಂಗ್ಲೆಂಡ್ 1928 ರಲ್ಲಿ ಆಸ್ಟ್ರೇಲಿಯಾವನ್ನು 675 ರನ್‌ಗಳಿಂದ ಸೋಲಿಸಿತ್ತು. ಆಸ್ಟ್ರೇಲಿಯಾ ಆರು ವರ್ಷಗಳ ಅಂದರೆ 1934ರಲ್ಲಿ ಇಂಗ್ಲೆಂಡ್ನ್ನು 562 ರನ್‌ಗಳಿಂದ ಸೋಲಿಸಿತ್ತು. ಬಾಂಗ್ಲಾದೇಶ ಮೂರನೇ ಬೃಹತ್ ಗೆಲುವು ದಾಖಲಿಸಿದೆ.
90 ವರ್ಷಗಳ ನಂತರ ಟೆಸ್ಟ್ನಲ್ಲಿ 500ಕ್ಕೂ ಹೆಚ್ಚು ರನ್ ಅಂತರದ ಗೆಲುವು: 1934 ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಆರು ವರ್ಷಗಳ ಹಿಂದಿನ ಸೇಡಿನ ಗೆಲುವನ್ನು ದಾಖಲಿಸಿತ್ತು. ಇದಾದ ನಂತರ ಟೆಸ್ಟ್ನಲ್ಲಿ ಇಷ್ಟು ಬೃಹತ್ ಮೊತ್ತದ ಗೆಲುವು ದಾಖಲಾಗಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಬಾಂಗ್ಲಾದೇಶ ಆಡಿದ ಏಕೈಕ ಟೆಸ್ಟ್ನಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
ಜೂನ್ 14 ರಿಂದ ಜುಲೈ 16ರ ವರೆಗೆ ಒಂದು ಟೆಸ್ಟ್, ಮೂರು ಏಕದಿನ ಮತ್ತು ಎರಡು ಟಿ20 ಪಂದ್ಯಕ್ಕಾಗಿ ಅಫ್ಘಾನಿಸ್ತಾನ ಬಾಂಗ್ಲಾದೇಶದ ಪ್ರವಾಸದಲ್ಲಿದೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದ ನಜ್ಮುಲ್ ಹೊಸೈನ್ ಶಾಂಟೊ (146) ಶತಕ ಮತ್ತು ಮಹಮ್ಮದುಲ್ ಹಸನ್ ಜಾಯ್ (76) ಅವರ ಅರ್ಧಶತಕದ ನೆರವಿನಿಂದ 382 ರನ್ ಬೃಹತ್ ಇನ್ನಿಂಗ್ಸ್ ಆಡಿತ್ತು.ಇದೇ ಅಫ್ಘಾನಿಸ್ತಾನಕ್ಕೆ ಹೊರೆಯಾಗಿತ್ತು ಎಂದು ಹೇಳಬುದು. 7 ಜನ ಬೌಲರ್ಗಳ ಪ್ರಯತ್ನ ಪಟ್ಟರೂ ಅಫ್ಘಾನ್ಗೆ ಬಾಂಗ್ಲಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಆಗಲಿಲ್ಲ.
ಎರಡನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ಅಲ್ಪಮೊತ್ತಕ್ಕೆ ಕುಸಿಯಿತು. ಎಬಾಡೋತ್ ಹೊಸೈನ್ ಅವರ ದಾಳಿಗೆ ಅಫ್ಘಾನ್ ಕುಸಿಯಿತು. ಕೇವಲ 39 ಓವರ್ಗಳನ್ನು ಆಡಿದ ಅಫ್ಘಾನಿಸ್ತಾನದ ಆಟಗಾರರು 146 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದ 236 ರನ್ ಮುನ್ನಡೆಯನ್ನು ಬಾಂಗ್ಲಾ ಪಡೆಯಿತು. ಆದರೆ ಫಾಲೋ ಆನ್ ಕೊಡಲು ತಂಡ ಮುಂದಾಗಲಿಲ್ಲ. ಎರಡನೇ ಇನ್ನಿಂಗ್ಸ್ ಆಡಲು ಬಾಂಗ್ಲಾ ಅಣಿಯಾಯಿತು.