ಕರ್ನಾಟಕ

karnataka

ಡೋಪಿಂಗ್​ನಲ್ಲಿ ಫೇಲ್​: ಬಾಂಗ್ಲಾದೇಶ ಬೌಲರ್​ಗೆ 10 ತಿಂಗಳು ಅಮಾನತು ಶಿಕ್ಷೆ

By

Published : Jul 14, 2022, 10:58 PM IST

ಐಸಿಸಿಯ ಡೋಪಿಂಗ್ ನಿಯಮ ಉಲ್ಲಂಘಿಸಿದ ಬಾಂಗ್ಲಾದೇಶದ ವೇಗದ ಬೌಲರ್ ಶೋಹಿದುಲ್ ಇಸ್ಲಾಂ ಅಮಾನತು.

ಬಾಂಗ್ಲಾದೇಶ ಬೌಲರ್​ಗೆ 10 ತಿಂಗಳು ಅಮಾನತು ಶಿಕ್ಷೆ
ಬಾಂಗ್ಲಾದೇಶ ಬೌಲರ್​ಗೆ 10 ತಿಂಗಳು ಅಮಾನತು ಶಿಕ್ಷೆ

ಬಾಂಗ್ಲಾದೇಶದ ವೇಗದ ಬೌಲರ್ ಶೋಹಿದುಲ್ ಇಸ್ಲಾಂ ಐಸಿಸಿಯ ಡೋಪಿಂಗ್ ನಿಯಮ ಮೀರಿದ್ದರಿಂದ 10 ತಿಂಗಳು ಕಾಲ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿಷೇಧ ಹೇರಲಾಗಿದೆ. ಡೋಪಿಂಗ್​ ಸಂಹಿತೆಯ ಆರ್ಟಿಕಲ್ 2.1 ಅನ್ನು ಉಲ್ಲಂಘಿಸಿದ್ದಾಗಿ ತಪ್ಪೊಪ್ಪಿಕೊಂಡ ನಂತರ ಶೋಹಿದುಲ್​ರನ್ನು ಅಮಾನತುಗೊಳಿಸಲಾಗಿದೆ.

ಬಾಂಗ್ಲಾದೇಶ ಪರವಾಗಿ ಏಕೈಕ ಟಿ-20 ಪಂದ್ಯವನ್ನಾಡಿರುವ ಶೋಹಿದುಲ್ ಐಸಿಸಿಯ ಔಟ್ ಆಫ್ ಸ್ಪೋರ್ಟ್​ ಪರೀಕ್ಷೆಯಲ್ಲಿ ಭಾಗಿಯಾಗಿ ಮೂತ್ರದ ಮಾದರಿಯನ್ನು ಒದಗಿಸಿದ್ದರು. ಈ ವೇಳೆ, ಅವರ ದೇಹದಲ್ಲಿ ನಿಷೇಧಿತ 'ಕ್ಲೋಮಿಫೆನ್' ಅಂಶ ಇರುವಿಕೆ ಪತ್ತೆಯಾಗಿತ್ತು. ಇದು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ(ವಾಡಾ)ದ ನಿಷೇಧಿತ ಪಟ್ಟಿಯಲ್ಲಿದೆ. ಹೀಗಾಗಿ ಇಸ್ಲಾಂ ಡೋಪಿಂಗ್​ ನಿಯಮವನ್ನು ಉಲ್ಲಂಘಿಸಿದಂತಾಗಿದೆ.

ಶೋಹಿದುಲ್ ಇಸ್ಲಾಂ, "ಚಿಕಿತ್ಸೆಯ ವೇಳೆ ವೈದ್ಯರ ಶಿಫಾರಸಿನ ಮೇಲೆ ನಿಷೇಧಿತ ಕ್ಲೋಮಿಫೆನ್ ಅಂಶದ ಔಷಧವನ್ನು ಪಡೆದುಕೊಂಡಿದ್ದಾರೆ. ಇದು ಉದ್ದೇಶ ಪೂರ್ವಕವಾಗಿರದೇ ಅಜಾಗರೂಕತೆಯಿಂದ ಪಡೆದಿದ್ದಾರೆ. ಹೀಗಾಗಿ ಅವರ ನಿಷೇಧದ ಅವಧಿಯನ್ನು ಅಲ್ಪಾವಧಿಗೆ ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ಅಮಾನತು ಆದೇಶ ಮೇ 28 ರಿಂದಲೇ ಜಾರಿಗೆ ಬರಲಿದ್ದು, ಮಾರ್ಚ್ 28, 2023 ರಿಂದ ಮತ್ತೆ ಅವರು ಕ್ರಿಕೆಟ್​ ಆಡಲು ಅರ್ಹತೆ ಪಡೆಯಲಿದ್ದಾರೆ.

ಓದಿ:IND vs ENG 2nd ODI: 4 ವಿಕೆಟ್​ ಕಿತ್ತು ಮಿಂಚಿದ ಚಹಲ್​; ಭಾರತದ ಗೆಲುವಿಗೆ 247ರನ್​ ಟಾರ್ಗೆಟ್​

ABOUT THE AUTHOR

...view details