ಮೌಂಟ್ ಮಾಂಗುನುಯಿ: ಕಳೆದ 5 ವರ್ಷಗಳಿಂದ ತವರಿನಲ್ಲಿ ಸೋಲಿಲ್ಲದ ಸರದಾರನಾಗಿ ಮೆರದಾಡುತ್ತಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಬಾಂಗ್ಲಾದೇಶ ತಂಡ ಆಘಾತಕಾರಿ ಸೋಲುಣಿಸಿದೆ. ಶನಿವಾರ ಮೊದಲ ಟೆಸ್ಟ್ ಪಂದ್ಯವನ್ನು 8 ವಿಕೆಟ್ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ.
2017ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಬಾರಿ ಸೋಲು ಕಂಡಿದ್ದ ನ್ಯೂಜಿಲ್ಯಾಂಡ್ 16 ಟೆಸ್ಟ್ಗಳ ಬಳಿಕ ಮೊದಲ ಸೋಲು ಕಂಡಿದೆ. ಭಾರತ, ಪಾಕಿಸ್ತಾನ, ಮತ್ತು ಇಂಗ್ಲೆಂಡ್ ಅಂತಹ ಬಲಿಷ್ಠ ತಂಡಗಳ ವಿರುದ್ಧ ಏಕ ಪಕ್ಷೀಯ ಗೆಲುವು ಸಾಧಿಸಿದ್ದ ಕಿವೀಸ್ ತಂಡ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಮರೆಯಲಾಗದ ಸೋಲು ಕಂಡಿದೆ. ಇದು ನ್ಯೂಜಿಲ್ಯಾಂಡ್ ನೆಲದಲ್ಲಿ ಬಾಂಗ್ಲಾದೇಶ ಸಾಧಿಸಿದ ಮೊದಲ ಅಂತಾರಾಷ್ಟ್ರೀಯ ಗೆಲುವಾಗಿದೆ.
ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲೇಥಮ್ ಮುನ್ನಡೆಸಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ 328 ರನ್ಗಳಿಸಿತ್ತು. ಡೆವೊನ್ ಕಾನ್ವೆ (122) ಶತಕ ಸಿಡಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.
ಇನ್ನು 329 ರನ್ಗಳನ್ನು ಹಿಂಬಾಲಿಸಿದ್ದ ಬಾಂಗ್ಲಾ ಟೈಗರ್ಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಹಸನ್ ಜಾಯ್(78), ಶಂಟೋ(64),ಮೊಮಿನುಲ್ ಹಕ್(88) ಮತ್ತು ಲಿಟನ್ ದಾಸ್(86) ಅವರ ಅರ್ಧಶತಕದ ನೆರವಿನಿಂದ 458 ರನ್ಗಳಿಸಿ 130 ರನ್ಗಳ ಅಮೂಲ್ಯವಾದ ಮುನ್ನಡೆ ಪಡೆದುಕೊಂಡಿತ್ತು.
ಕಿವೀಸ್ 169ಕ್ಕೆ ಆಲೌಟ್