ಢಾಕಾ:ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಎರಡನೇ ಟಿ-20 ಪಂದ್ಯವನ್ನು 5 ವಿಕೆಟ್ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0ಯಲ್ಲಿ ಮುನ್ನಡೆ ಸಾಧಿಸಿದೆ.
ಢಾಕಾದಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ 20 ಓವರ್ಗಳ ಕೋಟಾದಲ್ಲಿ 121 ರನ್ಗಳಿಸಿತು. ಮೊದಲ ಪಂದ್ಯದಂತೆ ಇಂದೂ ಕೂಡ ಬಾಂಗ್ಲಾ ಬೌಲರ್ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ (45) ಮತ್ತು ಹೆನ್ರಿಕ್ಸ್ (30) ಹೊರತು ಪಡಿಸಿ ಯಾವೊಬ್ಬ ಬ್ಯಾಟ್ಸ್ಮನ್ ಕೂಡ 20 ರ ಗಡಿದಾಟಲಿಲ್ಲ.
ಆರಂಭಿಕನಾಗಿ ಬಡ್ತಿ ಪಡೆದಿದ್ದ ಅಲೆಕ್ಸ್ ಕ್ಯಾರಿ 11, ಯುವ ಆರಂಭಿಕ ಬ್ಯಾಟ್ಸ್ಮನ್ ಜೋಶ್ ಫಿಲಪ್ಪೆ 10, ನಾಯಕ ವೇಡ್ 4, ಆಶ್ಟನ್ ಅಗರ್ 0, ಟರ್ನರ್ 3 ರನ್ಗಳಿಸಿದರು.
ಬಾಂಗ್ಲಾದೇಶದ ಪರ ಮುಸ್ತಫಿಜುರ್ ರಹಮಾನ್ 3, ಶೋರಿಫುಲ್ ಇಸ್ಲಾಮ್ 2, ಶಕಿಬ್ ಮತ್ತು ಮೆಹೆದಿ ಹಸನ್ ತಲಾ ಒಂದು ವಿಕೆಟ್ ಪಡೆದು ಆಸೀಸ್ ತಂಡವನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.